ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಓಡಬೈ ನಲ್ಲಿ ಧ್ವಜ ವಿತರಣೆ.!

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಓಡಬೈ ನಲ್ಲಿ ಧ್ವಜ ವಿತರಣೆ ನಡೆಯಿತು. ಓಡಬೈ ಸಿದ್ದೀಕ್ ರವರ ಅಂಗಡಿಗೆ ಧ್ವಜ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿಝಾರ್, ಅಶ್ರಫ್, ಸಿದ್ದೀಕ್, ಅಬ್ದುಲ್ ಖಾದರ್, ತಾಜುದ್ದೀನ್ ಉಪಸ್ಥಿತರಿದ್ದರು.

Continue Reading

ಕೊಡಗು: ಮದೆನಾಡು ಬಳಿ ಮಣ್ಣು ಕುಸಿತ.!

ಮಡಿಕೇರಿ ಆ.11 :  ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಬಳಿ  ಬಿರುಕು ಬಿಟ್ಟಿದ್ದ ಗುಡ್ಡದ ಕೆಳಭಾಗದಲ್ಲಿ ಮಣ್ಣು ಕುಸಿತಗೊಂಡಿದ್ದು, ಹಿಟಾಚಿ ಮೂಲಕ ಮಣ್ಣು ತೆರವು ಕಾರ್ಯ ನಡೆಯಿತು. ಗುಡ್ಡದಲ್ಲಿ ಕಳೆದ 2 ದಿನಗಳ ಹಿಂದೆ ಬಿರುಕು ಕಾಣಿಸಿಕೊಂಡಿದ್ದು, ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಲಾಗಿತ್ತು.

Continue Reading

ಸುಣ್ಣಮೂಲೆ: ತಲ್ವಾರ್ ಹಿಡಿದು ನಡೆದಾಡಿದ ವ್ಯಕ್ತಿಯನ್ನು ಬಂಧಿಸಿದ ಪೋಲಿಸ್.!

ಸುಣ್ಣಮೂಲೆಯಲ್ಲಿ ಸಂದೀಪ್ ಎಂಬ ಯುವಕ ತಲವಾರು ಹಿಡಿದುಕೊಂಡು ರಸ್ತೆಯಲ್ಲಿ ರಾಜರೋಷವಾಗಿ ನಡೆದಾಡುತ್ತಿದ್ದ, ಈ ವ್ಯಕ್ತಿಯನ್ನು ನೋಡಿ ಸಾರ್ವಜನಿಕರು ಭಯಭೀತರಾಗಿದ್ದರು, ತಲವಾರು ಹಿಡಿದು ನಡೆದಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಇದನ್ನು ಗಮನಿಸಿದ ಸಂದೀಪ್ ನನ್ನು ಸುಳ್ಯ ಪೊಲೀಸರು ಬಂಧಿಸಿದ್ದು ಸುಮೊಟೋ ಪ್ರಕರಣ ದಾಖಲಿಸಿದ್ದಾರೆ. ಸಂದೀಪ್ ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದು, ಕಳೆದ 8 ತಿಂಗಳಿನಿಂದ ಮದ್ಯಪಾನ ಸೇವನೆ ನಿಲ್ಲಿಸಿದ್ದು, ನಿನ್ನೆಯ ದಿನ ಮದ್ಯಪಾನ ವಾಪಾಸು ಆರಂಭಿಸಿದ ಹಿನ್ನೆಲೆಯಲ್ಲಿ ಮಾನಸಿಕ ಸ್ಥಿರತೆ ಕಳೆದುಕೊಂಡು ಈ […]

Continue Reading

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಆರೋಪಿ ಆಬಿದ್, ನೌಫಲ್ ರಿಗೆ ನ್ಯಾಯಾಂಗ ಬಂಧನ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 7 ರಂದು ಬಂಧನಕ್ಕೊಳಗಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಪುತ್ತೂರು ಡಿ ವೈ ಎಸ್ ಪಿ ಡಾ. ಪಿ ಗಾನಾ ಕುಮಾರ್ ಅವರ ನೇತೃತ್ವದಲ್ಲಿ ಇಂದು ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹತ್ಯೆ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಸುಳ್ಯ ನಾವೂರು ನಿವಾಸಿ ಆಬಿದ್ ಹಾಗೂ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಾಲ್, ಎಂಬವರನ್ನು ನಿನ್ನೆ ಪೊಲೀಸರು ಬಂಧಿಸಿದ್ದರು. ಹೆಚ್ಚಿನ‌ ಮಾಹಿತಿ ಕಲೆ ಹಾಕುವ ಸಲುವಾಗಿ ಇಂದು ಬೆಳಿಗ್ಗೆ ಇವರನ್ನು ಸುಳ್ಯ […]

Continue Reading

ಸುಳ್ಯ: ಮಾರ್ಕೆಟ್ ತಿರುವಿನ ಬಳಿ ಬೃಹದಾಕಾರದ ಹೊಂಡ ನಿರ್ಮಾಣ.!

ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ 275 ರಲ್ಲಿ ಮಳೆಯಿಂದಾಗಿ ರಸ್ತೆ ಕೆಟ್ಟುಹೋಗಿದೆ. ಸುಳ್ಯ ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಒಂದಾದ, ನಗರ ಪಂಚಾಯತ್ ಗೆ ಸಂಪರ್ಕಿಸುವ ತಿರುವಿನಲ್ಲಿ ಬೃಹದಾಕಾರದ ಹೊಂಡ ನಿರ್ಮಾಣವಾಗಿದ್ದು. ದ್ವಿಚಕ್ರ ಸೇರಿದಂತೆ ವಾಹನ ಸವಾರರಿಗೆ ಸಂಚರಿಸಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

Continue Reading

ವಿಶ್ವ ಅರೆಭಾಷೆ ಹಬ್ಬ; ಆಚರಣೆಯಿಂದ ಮಾತ್ರ ಸಂಸ್ಕೃತಿ, ಪರಂಪರೆಯ ಉಳಿವು- ಡಾ.ರೇಣುಕಾ ಪ್ರಸಾದ್.!

ಸುಳ್ಯ: ಆಚರಣೆಗಳಿಂದ ಮಾತ್ರ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಗು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾಪ್ರಸಾದ್ ತಿಳಿಸಿದರು. ಸುಳ್ಯ ಗೌಡರ ಯುವ ಸೇವಾ ಸಂಘ ,ಕೊಡಗು ಗೌಡ ಯುವ ವೇದಿಕೆ ಮತ್ತು ಆಂಗಿಕ ಮಲ್ಟಿ ಮೀಡಿಯಾ ಇದರ ಸಹಯೋಗದಲ್ಲಿ ರಂಗ ಮಯೂರಿ ಕಲಾ ಶಾಲೆಯಲ್ಲಿ ಆ.7 ರಂದು ನಡೆದ 3 ನೇ ವರ್ಷದ ವಿಶ್ವ ಅರೆಭಾಷೆ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ […]

Continue Reading

ಸಂಪಾಜೆ ಜಲ ಪ್ರವಾಹ; ತೇಲಿಹೋದ ಗ್ಯಾಸ್ ಸಿಲಿಂಡರ್;
ಹಿಂದುರುಗಿಸಿದ ಪೇರಡ್ಕ ಯುವಕರು.!

ಸಂಪಾಜೆ ಗ್ರಾಮದಲ್ಲಿ ಭೀಕರ ಮಳೆಯಿಂದ ಜಲ ಪ್ರವಾಹ ಉಂಟಾಗಿ ಕಲ್ಲುಗುಂಡಿ ಹೊಳೆಯ ಸಮೀಪ ಸಂಗಂ ಕಟ್ಟಡದಲ್ಲಿ ಇರುವ ದೈನಾಬಿ ಯವರ ಮನೆಸಾಮಗ್ರಿಗಳು ನೀರಲ್ಲಿ ಕೊಚ್ಚಿ ಹೋಗಿ ಪೇರಡ್ಕ ಪಯಸ್ವಿನಿ ಹೊಳೆಯಲ್ಲಿ ಹರಿದು ಬಂದಾಗ ಅದನ್ನು ಪೇರಡ್ಕದ ಯುವಕರುಗಳಾದ ಜುರೈದ್ ತೆಕ್ಕಿಲ್ ಪೇರಡ್ಕ, ಸಾದುಮನ್ ತೆಕ್ಕಿಲ್ ಪೇರಡ್ಕ, ಸುಹೈಲ್ ಪೇರಡ್ಕ, ಸುನಿಲ್ ಎಕ್ಸ್ ಆರ್ಮಿ ಪೇರಡ್ಕ, ಜನತಾದಳ ಮುಖಂಡ ಹನೀಫ್ ಮೊಟ್ಟೆಂಗರ್ ಹಾಗೂ ಅಬ್ದುಲ್ ಖಾದರ್ ಮೋಟ್ಟೆಂಗಾರ್ ಮೊದಲಾದವರು ಮನೆ ಸಾಮಗ್ರಿಗಳನ್ನು ಹಿಡಿದುಕೊಡು ಸಂಗ್ರಹಿಸಿದ್ದರು. ಮರುದಿನ ವಾಟ್ಸಫ್ ಮುಖಾಂತರ […]

Continue Reading

ಕ್ಯಾಂಪಸ್ ಪ್ಲೇಸ್ಮೆಂಟ್; ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಿಂದ ವಿವಿಧ ಕಂಪೆನಿಗಳಿಗೆ ಆಯ್ಕೆ.!

ಕೆ.ವಿ.ಜಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸುಭಾಶ್ ಎಂ. STRAECON  ಕಂಪೆನಿಗೆ ಮತ್ತು ಗಮನ್‌ರಾಜ್ ಕೆ.ಯು. NASH  ಕಂಪೆನಿಗೆ ಹಾಗೂ ಎಂ.ಬಿ.ಎ. ವಿಭಾಗದ ವಿದ್ಯಾರ್ಥಿಗಳಾದ ಮಹಾಲಕ್ಷ್ಮಿ ಬಿ.ಸಿ., ಅಬ್ದುಲ್ ಹಕೀಮ್ ಎಂ. ಮತ್ತು ದೀಕ್ಷಿತ್ ಕೆ.ಆರ್. Jana Small Finance Bank ಗೆ ಆಯ್ಕೆಯಾಗಿದ್ದಾರೆ

Continue Reading

ಸುಳ್ಯ: ನಾಳೆ ಶಾಲಾ ಕಾಲೇಜುಗಳಿಗೆ ರಜೆ

ಸುಳ್ಯ: ಎಡೆಬಿಡದೆ ಸುರಿದ ಮಳೆಯಿಂದಾಗಿ ಸುಳ್ಯ  ತಾಲೂಕಿನಲ್ಲಿ ನಾಳೆಯು (ಅ-4) ಶಾಲಾ- ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಸಾರಲಾಗಿದೆ.

Continue Reading

ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಆಟೋ; ಪರಿಣಾಮ ಓರ್ವ ಸಾವು – ಇಬ್ಬರು ಗಾಯ.!

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಮೊಗ್ರಾಲ್‌ ಪುತ್ತೂರಿನಲ್ಲಿ ಆಟೋರಿಕ್ಷಾವೊಂದು ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಘಟನೆ ಸಂಭವಿಸಿದ್ದು, ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ. ಗದಗ ಸಿತ್ತಾರಹಳ್ಳಿ ನಿವಾಸಿ ಎಲ್ಲಪ್ಪ ಅವರ ಪುತ್ರ ಪ್ರಕೃತಚೂರಿಯಲ್ಲಿ ವಾಸವಾಗಿರುವ ಮೋನಪ್ಪ (31) ಎಂದು ತಿಳಿದು ಬಂದಿದೆ. ಅವರು ಕೂಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವಾಗ ಮೊಗ್ರಾಲ್‌ ಪುತ್ತೂರು ಕಂಬಾರು ರಸ್ತೆಯ ಎಡಚೇರಿ ಎಂಬಲ್ಲಿ ಆಟೋರಿಕ್ಷಾ ಪಲ್ಟಿಯಾಗಿ ತೋಡಿಗೆ ಬಿದ್ದಿದೆ ಎನ್ನಲಾಗಿದೆ. ಆಟೋರಿಕ್ಷಾದೊಳಗೆ ಸಿಲುಕಿದವರನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆಟೋ ಚಾಲಕ ಬೆಳ್ಳೂರಿನ […]

Continue Reading