ಸಿಕ್ಕಿಂನಲ್ಲಿ ಹಿಮಪಾತ – ಸಿಲುಕಿಕೊಂಡಿದ್ದ 800 ಪ್ರವಾಸಿಗರನ್ನು ರಕ್ಷಿಸಿದ ಸೇನೆ

ಗ್ಯಾಂಗ್ಟಾಕ್: ಪೂರ್ವ ಸಿಕ್ಕಿಂನ (Sikkim) ಪರ್ವತ ಪ್ರದೇಶದಲ್ಲಿ ಹಿಮಪಾತವಾದ (Snowfall) ಹಿನ್ನೆಲೆ ಸಿಲುಕಿಕೊಂಡಿದ್ದ 800ಕ್ಕೂ ಹೆಚ್ಚು ಪ್ರವಾಸಿಗರನ್ನು ಸೇನಾ ಅಧಿಕಾರಿಗಳು ಬುಧವಾರ ರಕ್ಷಿಸಿದ್ದಾರೆ. ಬುಧವಾರ ಹಿಮಪಾತವಾದ ಹಿನ್ನೆಲೆ ಭಾರತೀಯ ಸೇನೆಯ ವಿಭಾಗವಾದ ತ್ರಿಶಕ್ತಿ ಕಾರ್ಪ್ಸ್‌ನ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರಕ್ಷಣಾ ಕಾರ್ಯಾಚರಣೆ ಸಂಜೆಯವರೆಗೂ ಮುಂದುವರಿದಿದೆ. ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಅವರಿಗೆ ಆಶ್ರಯ, ಬೆಚ್ಚಗಿನ ಬಟ್ಟೆ, ವೈದ್ಯಕೀಯ ನೆರವು ಹಾಗೂ ಬಿಸಿ ಊಟವನ್ನೂ ಒದಗಿಸಲಾಗಿದೆ.

ಸಿಕ್ಕಿಂನಲ್ಲಿ ಹಿಮಪಾತ – ಸಿಲುಕಿಕೊಂಡಿದ್ದ 800 ಪ್ರವಾಸಿಗರನ್ನು ರಕ್ಷಿಸಿದ ಸೇನೆ Read More »