ಬಿಜೆಪಿ ಮುಖಂಡ ಪ್ರವೀಣ್ ಕೊಲೆ ಪ್ರಕರಣ; ಆರೋಪಿಗಳಿಗೆ ಶರಣಾಗಲು ಜೂನ್ 30 ಡೆಡ್ ಲೈನ್, ತಪ್ಪಿದ್ದಲ್ಲಿ ಆರೋಪಿಗಳ ಮನೆ ಜಪ್ತಿ- ಸುಳ್ಯ ಪೇಟೆಯಲ್ಲಿ ಅನೌನ್ಸ್
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ಮತ್ತೊಂದು ಪ್ರಯೋಗ ನಡೆಸಿದೆ. ಕೊಲೆ ಆರೋಪಿಗಳು ಇದೇ ಬರುವ ಜೂ. 30 ರೊಳಗೆ ಶರಣಾಗದೇ ಇದ್ದಲ್ಲಿ, ಆರೋಪಿಗಳ ಮನೆಯನ್ನು ಜಪ್ತಿ ಮಾಡಲಾಗುವುದೆಂದು ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಅನೌನ್ಸಿಂಗ್ ನಡೆಸಿದೆ. ಅದೇ ರೀತಿ ಆರೋಪಿಗಳ ಸುಳಿವು, ಯಾರಾದರೂ ನೀಡಿದ್ದಲ್ಲಿ, ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಲಾಗುತ್ತಿದೆ. ಸುಳ್ಯದ ಕಲ್ಲು ಮುಟ್ಲುವಿನಲ್ಲಿ ವಾಸವಿರುವ ಆರೋಪಿ ಉಮ್ಮರ್ ಫಾರೂಕ್ ಅವರ ಮನೆಗೂ ಹೋಗಿನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಿ …