ಮಳೆ

ಸುಳ್ಯ: ಮಾರ್ಕೆಟ್ ತಿರುವಿನ ಬಳಿ ಬೃಹದಾಕಾರದ ಹೊಂಡ ನಿರ್ಮಾಣ.!

ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ 275 ರಲ್ಲಿ ಮಳೆಯಿಂದಾಗಿ ರಸ್ತೆ ಕೆಟ್ಟುಹೋಗಿದೆ. ಸುಳ್ಯ ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಒಂದಾದ, ನಗರ ಪಂಚಾಯತ್ ಗೆ ಸಂಪರ್ಕಿಸುವ ತಿರುವಿನಲ್ಲಿ ಬೃಹದಾಕಾರದ ಹೊಂಡ ನಿರ್ಮಾಣವಾಗಿದ್ದು. ದ್ವಿಚಕ್ರ ಸೇರಿದಂತೆ ವಾಹನ ಸವಾರರಿಗೆ ಸಂಚರಿಸಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಸುಳ್ಯ: ಮಾರ್ಕೆಟ್ ತಿರುವಿನ ಬಳಿ ಬೃಹದಾಕಾರದ ಹೊಂಡ ನಿರ್ಮಾಣ.! Read More »

ದೇವರಕೊಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು.!

ಕೆಲ ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಹಲವೆಡೆ ಪ್ರವಾಹವಾಗಿದ್ದು ಜನಜೀವನ ಅಸ್ಥವ್ಯಸ್ಥವಾಗಿದೆ, ಇದೀಗ ದೇವರಕೊಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿ ಬಿರುಕು ಬಿದ್ದಿದ್ದು ಸ್ಥಳೀಯರಿಗೂ ಹಾಗೂ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಈ ಮಳೆ.

ದೇವರಕೊಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು.! Read More »

ಮಳೆಯ ರುದ್ರ ಅವತಾರ; ಮುಂದಿನ ಕೆಲವು ದಿನಗಳವರೆಗೆ ಶುದ್ದೀಕರಿಸಿದ ನೀರು ಸಿಗುವುದು ಅಸಾಧ್ಯ- ಅದಷ್ಟು ಮಳೆ ನೀರನ್ನು ಶೇಖರಿಸಿ- ನ.ಪಂ. ಅಧ್ಯಕ್ಷರ ಮಾತು

ಸುಳ್ಯ: ಸುಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ದಿನಗಳಲ್ಲಿ ಎಡಬಿಡಿದೆ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಹಾನಿಗೊಳಗಾಗಿವೆ. ಮಡಿಕೇರಿ ಭಾಗದ ಮೊಣ್ಣಂಗೇರಿಯಲ್ಲಿ ಉಂಟಾದ ಭೂಕುಸಿತದಿಂದ ಮಳೆನೀರು ಕೆಸರುಮಯವಾಗಿದ್ದು ಶುಧ್ದಿಕರಿಸಲು ಕಷ್ಟಸಾಧ್ಯವಾಗಿದೆ, ಆದರಿಂದ ಮುಂದಿನ ಎರಡು ಮೂರು ದಿನಗಳ ವೆರೆಗೆ ತಮ್ಮ ತಮ್ಮ ಮನೆಯಲ್ಲಿ ಮಳೆ‌ನೀರು ಕೊಯ್ಲು ಮಾಡಿ ನೀರನ್ನು ಶೇಖರಿಸಿ ಉಪಯೋಗಿಸಬೇಕಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರು ವಿನಂತಿಸಿದ್ದಾರೆ.!

ಮಳೆಯ ರುದ್ರ ಅವತಾರ; ಮುಂದಿನ ಕೆಲವು ದಿನಗಳವರೆಗೆ ಶುದ್ದೀಕರಿಸಿದ ನೀರು ಸಿಗುವುದು ಅಸಾಧ್ಯ- ಅದಷ್ಟು ಮಳೆ ನೀರನ್ನು ಶೇಖರಿಸಿ- ನ.ಪಂ. ಅಧ್ಯಕ್ಷರ ಮಾತು Read More »

ಮಳೆ ಅವಾಂತರ; ಸುಳ್ಯ, ಕಡಬ ತಾಲೂಕಿನ ಶಾಲಾ-ಕಾಲೇಜು ಕೇಂದ್ರಗಳಿಗೆ ರಜೆ!

ಸುಳ್ಯ: ಎಡೆಬಿಡದೆ ಸುರಿದ ಮಳೆಯಿಂದಾಗಿ ಸುಳ್ಯ ಹಾಗೂ ಕಡಬ ತಾಲೂಕಿನ ಶಾಲಾ- ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಸಾರಲಾಗಿದೆ. ತಹಶಿಲ್ದಾರ್ ಅನಿತಾಲಕ್ಷ್ಮಿ ಯವರು ಈ ಆದೇಶ ಹೊರಡಿಸಿದ್ದಾರೆ.

ಮಳೆ ಅವಾಂತರ; ಸುಳ್ಯ, ಕಡಬ ತಾಲೂಕಿನ ಶಾಲಾ-ಕಾಲೇಜು ಕೇಂದ್ರಗಳಿಗೆ ರಜೆ! Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ