ಸುಳ್ಯ

ಧ್ವನಿ ಬೆಳಕು & ಶಾಮಿಯಾನ: ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಕುಕ್ಕೆಶ್ರೀ ಚಾಂಪಿಯನ್, ಸುಳ್ಯ ಟೈಗರ್ಸ್ ರನ್ನರ್ಸ್

ಸುಳ್ಯ: ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಆಶ್ರಯದಲ್ಲಿ ಸುಳ್ಯದ ಜೆ.ಓ.ಸಿ ಮೈದಾನದಲ್ಲಿ ನಡೆದ ಸುಳ್ಯ ವಿಧಾನಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದಕ್ಕೆ ಅದ್ದೂರಿ ತೆರೆ ಕಂಡಿದೆ. ಕುಕ್ಕೆಶ್ರೀ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸುಳ್ಯ ಟೈಗರ್ಸ್ ರನ್ನರ್ಸ್ ಅಪ್ ಆಗಿದೆ. ಜಿದ್ದಾ ಜಿದ್ದಿನ ಫೈನಲ್ ಪಂದ್ಯದಲ್ಲಿ ಕುಕ್ಕೆಶ್ರೀ ತಂಡ 31-27 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಕುಕ್ಕೆಶ್ರೀ ತಂಡದ ಪರವಾಗಿ ಪ್ರೊ ಕಬಡ್ಡಿ ಆಟಗಾರರಾದ ಸಚಿನ್ ಪ್ರತಾಪ್, […]

ಧ್ವನಿ ಬೆಳಕು & ಶಾಮಿಯಾನ: ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಕುಕ್ಕೆಶ್ರೀ ಚಾಂಪಿಯನ್, ಸುಳ್ಯ ಟೈಗರ್ಸ್ ರನ್ನರ್ಸ್ Read More »

ಸುಳ್ಯ: ಭಾರತ್ ಜೋಡೋ ಯಾತ್ರೆ; ಕಾರ್ಯಕರ್ತರ ಪ್ರಯಾಣಕ್ಕೆ ಚಾಲನೆ.

ಸುಳ್ಯ: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯು ಇಂದು ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆಯಲ್ಲಿ ನಡೆಯುವ ಪಾದಯಾತ್ರೆಗೆ ಪಾಲ್ಗೊಳ್ಳಲು ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸುಮಾರು 20ಬಸ್ ಗಳಲ್ಲಿ 600ಕ್ಕೂ ಹೆಚ್ಚು ಕಾರ್ಯಕರ್ತರು ತೆರಳಿದ್ದಾರೆ. ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ ಜಯರಾಮ ಶುಭ ಹಾರೈಸಿದರು. ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುಳ್ಯ: ಭಾರತ್ ಜೋಡೋ ಯಾತ್ರೆ; ಕಾರ್ಯಕರ್ತರ ಪ್ರಯಾಣಕ್ಕೆ ಚಾಲನೆ. Read More »

ಮಳೆಯ ರುದ್ರ ಅವತಾರ; ಮುಂದಿನ ಕೆಲವು ದಿನಗಳವರೆಗೆ ಶುದ್ದೀಕರಿಸಿದ ನೀರು ಸಿಗುವುದು ಅಸಾಧ್ಯ- ಅದಷ್ಟು ಮಳೆ ನೀರನ್ನು ಶೇಖರಿಸಿ- ನ.ಪಂ. ಅಧ್ಯಕ್ಷರ ಮಾತು

ಸುಳ್ಯ: ಸುಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ದಿನಗಳಲ್ಲಿ ಎಡಬಿಡಿದೆ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಹಾನಿಗೊಳಗಾಗಿವೆ. ಮಡಿಕೇರಿ ಭಾಗದ ಮೊಣ್ಣಂಗೇರಿಯಲ್ಲಿ ಉಂಟಾದ ಭೂಕುಸಿತದಿಂದ ಮಳೆನೀರು ಕೆಸರುಮಯವಾಗಿದ್ದು ಶುಧ್ದಿಕರಿಸಲು ಕಷ್ಟಸಾಧ್ಯವಾಗಿದೆ, ಆದರಿಂದ ಮುಂದಿನ ಎರಡು ಮೂರು ದಿನಗಳ ವೆರೆಗೆ ತಮ್ಮ ತಮ್ಮ ಮನೆಯಲ್ಲಿ ಮಳೆ‌ನೀರು ಕೊಯ್ಲು ಮಾಡಿ ನೀರನ್ನು ಶೇಖರಿಸಿ ಉಪಯೋಗಿಸಬೇಕಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರು ವಿನಂತಿಸಿದ್ದಾರೆ.!

ಮಳೆಯ ರುದ್ರ ಅವತಾರ; ಮುಂದಿನ ಕೆಲವು ದಿನಗಳವರೆಗೆ ಶುದ್ದೀಕರಿಸಿದ ನೀರು ಸಿಗುವುದು ಅಸಾಧ್ಯ- ಅದಷ್ಟು ಮಳೆ ನೀರನ್ನು ಶೇಖರಿಸಿ- ನ.ಪಂ. ಅಧ್ಯಕ್ಷರ ಮಾತು Read More »

ಮಳೆ ಅವಾಂತರ; ಸುಳ್ಯ, ಕಡಬ ತಾಲೂಕಿನ ಶಾಲಾ-ಕಾಲೇಜು ಕೇಂದ್ರಗಳಿಗೆ ರಜೆ!

ಸುಳ್ಯ: ಎಡೆಬಿಡದೆ ಸುರಿದ ಮಳೆಯಿಂದಾಗಿ ಸುಳ್ಯ ಹಾಗೂ ಕಡಬ ತಾಲೂಕಿನ ಶಾಲಾ- ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಸಾರಲಾಗಿದೆ. ತಹಶಿಲ್ದಾರ್ ಅನಿತಾಲಕ್ಷ್ಮಿ ಯವರು ಈ ಆದೇಶ ಹೊರಡಿಸಿದ್ದಾರೆ.

ಮಳೆ ಅವಾಂತರ; ಸುಳ್ಯ, ಕಡಬ ತಾಲೂಕಿನ ಶಾಲಾ-ಕಾಲೇಜು ಕೇಂದ್ರಗಳಿಗೆ ರಜೆ! Read More »

(ಜು.30) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ!

ಸುಳ್ಯ ಜುಲೈ30: ಇಂದು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕಾವು, ಅಜ್ಜಾವರ, ಡಿಪೋ, ಕೇರ್ಪಳ, ಜಬಳೆ, ಕೇನ್ಯ, ಮಂಡೆಕೋಲು, ಶ್ರೀರಾಂಪೇಟೆ, ಸಂಪಾಜೆ, ಅರಂತೋಡು ಹಾಗೂ ಕೋಲ್ಚಾರು ಪೀಡರ್ ಗಳಲ್ಲಿ ದುರಸ್ತಿ ಕಾರ್ಯ ಹಾಗೂ ಟ್ರೀಕಟ್ಟಿಂಗ್ ಕಾರ್ಯ ನಡೆಯುತ್ತಿರುವುದರಿಂದ ಜು.30ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸುಳ್ಯ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

(ಜು.30) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ! Read More »

ಸಂಪೂರ್ಣ ಸ್ಥಬ್ದವಾದ ಸುಳ್ಯ; ನೆನಪಿಗೆ ಬಂದ ಲಾಕ್ ಡೌನ್ ದಿನಗಳು.!

ಸುಳ್ಯ : ಆಗಸ್ಟ್ 1ರವರೆಗೆ ದ.ಕ. ಜಿಲ್ಲೆಯಲ್ಲಿ ಅಗತ್ಯ ಸೇವೆಯನ್ನು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಇದರ ಪರಿಣಾಮ ಸುಳ್ಯ ನಗರ ಪ್ರದೇಶಗಳಲ್ಲಿ ಅಗತ್ಯ ಸೇವೆಗಳು,ಆಸ್ಪತ್ರೆ ಹಾಗೂ ಮೆಡಿಕಲ್ ಗಳನ್ನು ಹೊರತುಪಡಿಸಿ ಉಳಿದೆಲ್ಲ ಬಂದ್ ಆಗಿದ್ದು ಸುಳ್ಯ ಸಂಪೂರ್ಣ ನಿಶಬ್ದವಾಗಿ ಬಿಕೋ ಎನ್ನುತ್ತಿತ್ತು.

ಸಂಪೂರ್ಣ ಸ್ಥಬ್ದವಾದ ಸುಳ್ಯ; ನೆನಪಿಗೆ ಬಂದ ಲಾಕ್ ಡೌನ್ ದಿನಗಳು.! Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ