ಸುಬ್ರಹ್ಮಣ್ಯ: ಇಂಡಿಯಾ ಬುಕ್ ಆಫ್ ರೆಕಾರ್ಡ್’ಗೆ “ಗೌರಿತಾ ಕೆ.ಜಿ” ಹೆಸರು ಸೇರ್ಪಡೆ

ಸುಳ್ಯ: ಗೌರಿತಾ ಕೆ.ಜಿ, ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾಳೆ. ನಿರಂತರ 1 ಗಂಟೆ 10 ನಿಮಿಷ 32 ಸೆಕೆಂಡುಗಳ ಕಾಲ (1-10:32) ‘ಪದ್ಮಾಸನದಲ್ಲಿ’ ಇರುವ ಮೂಲಕ ನೂತನ ದಾಖಲೆ ಮಾಡಿದ್ದಾಳೆ. ನಿವೃತ್ತ ಶಿಕ್ಷಕರಾದ ಮೇರ್ಕಜೆ ಮೇದಪ್ಪ ಮಾಸ್ತರ್ ಹಾಗೂ ಶ್ರೀಮತಿ ಯನ್.ಕೆ ಭುವನೇಶ್ವರಿ ಅವರು ಮಾರ್ಗದರ್ಶನ ನೀಡಿದ್ದು, ಇವಳು ಕುಮಾರಸ್ವಾಮಿ ವಿದ್ಯಾಲಯದಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವಳು ಸಂಪಾಜೆ ಕಳಗಿ ಡಾ. ಗೌತಮ್ ಹಾಗೂ ಡಾ. ರಾಜೇಶ್ವರಿ ಅವರ ಪುತ್ರಿ.