ಸುಳ್ಯ: ಹೃದಯಾಘಾತದಿಂದ ಮೃತಪಟ್ಟ 2ನೇ ತರಗತಿ ವಿದ್ಯಾರ್ಥಿ

ಸುಳ್ಯ: ಇಲ್ಲಿನ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯ 2 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಕುಂಟಿಕಾನದ ಮೋಕ್ಷಿತ್ ಕೆ.ಸಿ. ಎಂಬ ಬಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನ.1 ರಂದು ವರದಿಯಾಗಿದೆ‌. ಬಾಲಕ ಎಂದಿನಂತೆ ಶಾಲೆಗೆ ಬಂದಿದ್ದು ನ.1 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನು. ಮಧ್ಯಾಹ್ನದ ವೇಳೆಗೆ ಬಾಲಕನಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡ ಕಾರಣ ಶಿಕ್ಷಕರು, ಪೋಷಕರಿಗೆ ದೂರವಾಣಿ ಮೂಲಕ ಜ್ವರ ಇರುವ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ. ಬಾಲಕ ನಿಂತಲ್ಲಿಯೇ ಹಠಾತ್ತನೆ ಕುಸಿದು ಬಿದ್ದಿರುತ್ತಾನೆ. […]

ಸುಳ್ಯ: ಹೃದಯಾಘಾತದಿಂದ ಮೃತಪಟ್ಟ 2ನೇ ತರಗತಿ ವಿದ್ಯಾರ್ಥಿ Read More »