ಉಡುಪಿಯಲ್ಲಿ ವಾಸವಿದ್ದ ಸುಳ್ಯ ಮೂಲದ ವ್ಯಕ್ತಿ ಆತ್ಮಹತ್ಯೆ

ಉಡುಪಿ: ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಶಿರ್ವದ ಇರ್ಮಿಜ್ ಚರ್ಚ್ ಬಳಿ ನಡೆದಿದೆ. ದಕ್ಷಿಣ ಕನ್ನಡದ ಸುಳ್ಯ ಸಂಪಾಜೆಯ ನಿವಾಸಿ ಲಿಯೋ ಕ್ರಿಸ್ಟೋಫರ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಲಿಯೋ ತಾನು ಇದ್ದ ಬಾಡಿಗೆ ಮನೆಯ ಬಳಿ ಮರವೊಂದಕ್ಕೆ ಕೇಬಲ್ ವಯರ್ ಬಳಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಜಾನೆ ಈ ವಿಷಯ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಡುಪಿಯಲ್ಲಿ ವಾಸವಿದ್ದ ಸುಳ್ಯ ಮೂಲದ ವ್ಯಕ್ತಿ ಆತ್ಮಹತ್ಯೆ Read More »