ಸುಳ್ಯ: ಜಾತಿ ನಿಂದನೆ, ಹಲ್ಲೆ ಪ್ರಕರಣ; ವಿದ್ಯಾರ್ಥಿಗಳಿಂದ ದೂರು, ಪ್ರತಿ ದೂರು.!

Uncategorized

ಸುಳ್ಯ: ದಂತ ವೈದ್ಯಕೀಯ ಕಾಲೇಜಿನ ಜೂನಿಯರ್ ವಿದ್ಯಾರ್ಥಿನಿಗೆ, ಅದೇ ಕಾಲೇಜಿನ ಹಿರಿಯ (senior) ವಿಭಾಗದ ವಿದ್ಯಾರ್ಥಿಗಳು ಜಾತಿ ನಿಂದನೆ ಹಾಗೂ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ಪೊಲೀಸ್ ದೂರು ನೀಡಿದ್ದಾರೆ. (ಆರೋಪ ಎದುರಿಸುತ್ತಿರುವ ಹಿರಿಯ ವಿದ್ಯಾರ್ಥಿಗಳು ಕೂಡಾ ತಮಗೂ ಹಲ್ಲೆ ನಡೆಸಲಾಗಿದೆ ಎಂದು ಪ್ರತಿದೂರು ನೀಡಿದ್ದಾರೆ). ನಾನು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಸಹಪಾಠಿ ವೈದ್ಯರುಗಳಾದ ವಿಶಾಕ್, ಐಶ್ವರ್ಯ ಆರ್, ಅಲ್ಫಮೇರಿ ಮ್ಯಾಥ್ಯೂ , ಡೆನಲ್ ಸಭಾ ಸ್ಟಿನ್, ರಿಷಿಕೇಶ್, ದಯಾ ಆನ್ ವರ್ಗೀಸ್ ಮತ್ತು ಇತರರು ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿನಿ ಡಾ. ಪಲ್ಲವಿ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಡಿಸೆಂಬರ್ 21ರಂದು ನನ್ನ ಅಣ್ಣ ವಿಜಯ್ ಮತ್ತು ಸಹಪಾಠಿಯೊಂದಿಗೆ ಸುಳ್ಯದ ಹೋಟೆಲ್ ಒಂದರಲ್ಲಿ ರಾತ್ರಿ ಊಟ ಮುಗಿಸಿ ಜೊತೆಯಿದ್ದ ಸಹಪಾಠಿಯನ್ನು ಅವರ ರೂಮಿಗೆ ಡ್ರಾಪ್ ನೀಡಲು ಹೋಗುತ್ತಿದ್ದ ಸಂದರ್ಭ ನಮ್ಮನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ಡಾ. ವಿಶಾಕ್ ಪಣಿಕ್ಕರ್ ಕೂಡಾ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ಡಾ. ಪಲ್ಲವಿ, ಡಾ. ಹನೀಶ್, ಪಲ್ಲವಿ ಅಣ್ಣ ಮತ್ತು ಇನ್ನೋರ್ವ ಅಪರಿಚಿತ ವ್ಯಕ್ತಿಯ ಮೇಲೆ‌ ಪ್ರತಿ ದೂರು ನೀಡಿದ್ದಾರೆ. ಡಿಸೆಂಬರ್ 21ರಂದು ರಾತ್ರಿ 10.30 ಕ್ಕೆ ನನ್ನ ಸ್ನೇಹಿತನನ್ನು ಆತ ಇರುವ ಪೀಜಿ ಕಡೆಗೆ ಡ್ರಾಪ್ ಮಾಡಲು ಹೋಗುತ್ತಿದ್ದಾಗ ಕೆವಿಜಿ ಐಪಿಎಸ್ ಸ್ಕೂಲ್ ನ ಹತ್ತಿರ ಇನ್ನೋವಾ ಕಾರೊಂದು ಬೆನ್ನಟ್ಟಿ ಬಂದು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾಕ್ ಲಿವರ್ನಿಂದ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ವೈದ್ಯರುಗಳಾದ ಪಲ್ಲವಿ, ಅನೀಶ್, ಪಲ್ಲವಿ ರವರ ಅಣ್ಣ, ಹಾಗೂ ಅಪರಿಚಿತ ವ್ಯಕ್ತಿ ಓರ್ವರು ಇದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಎರಡು ಕಡೆಯ ದೂರು ಸ್ವೀಕರಿಸಿರುವ ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *