ಸುಳ್ಯ: ಇಲ್ಲಿನ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ನ 2022-23 ನೇ ಸಾಲಿನ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿ ಕೊಟ್ಟರು, ವಿದ್ಯಾರ್ಥಿ ಕ್ಷೇಮಾಧಿಕಾರಿ ಸುನಿಲ್ಕುಮಾರ್ ಎನ್.ಪಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಪೇಕ್ಷ್ ಎಂ.ಪಿ (ಅಂತಿಮ ಸಿವಿಲ್), ಉಪಾಧ್ಯಕ್ಷರಾಗಿ ಪುಷ್ಪರಾಜ್ (ಅಂತಿಮ ಮೆಕ್ಯಾನಿಕಲ್), ಕಾರ್ಯದರ್ಶಿಯಾಗಿ ರಾಜೇಶ್ ಪಿ.ಎಂ (ಪ್ರಥಮ ಸಿವಿಲ್), ಜೊತೆ ಕಾರ್ಯದರ್ಶಿಯಾಗಿ ಕು.ಸೃಷ್ಟಿ (ಪ್ರಥಮ ಇಲೆಕ್ಟ್ರಿಕಲ್), ಕೋಶಾಧಿಕಾರಿಯಾಗಿ ಪಿ.ಶ್ರೀಕಾಂತ್ ರೆಡ್ಡಿ(ಅಂತಿಮ ಸಿವಿಲ್), ಜೊತೆ ಕೋಶಾಧಿಕಾರಿಯಾಗಿ ಚರಣ್ರಾಜ್(ಪ್ರಥಮ ಸಿವಿಲ್), ಕ್ರೀಡಾ ಕಾರ್ಯದರ್ಶಿಯಾಗಿ ಲಿಖಿತ್ ಎಸ್.ಆರ್ (ದ್ವಿತೀಯ ಅಟೊಮೊಬೈಲ್), ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಜೀವನ್ ಎ.ಆರ್(ಅಂತಿಮ ಸಿವಿಲ್), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಜ್ವಲ್ ಬಿ(ದ್ವಿತೀಯ ಅಟೊಮೊಬೈಲ್) ಮತ್ತು ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕು. ಶ್ರೀಕಲಾ (ಅಂತಿಮ ಕಂಪ್ಯೂಟರ್ ಸೈನ್ಸ್) ಇವರುಗಳು ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಉಪಪ್ರಾಂಶುಪಾಲ ಶ್ರೀಧರ್ ಎಂ.ಕೆ, ಸಹ ವಿದ್ಯಾರ್ಥಿಕ್ಷೇಮಾಧಿಕಾರಿ ಪ್ರಮೋದ್ ಬಿ.ಡಿ. ಲೆಕ್ಕ ಅಧೀಕ್ಷಕ ಧನಂಜಯ ಕಲ್ಲುಗದ್ದೆ ಮೊದಲಾದವರು ಉಪಸ್ಥಿತರಿದ್ದರು, ಅಕ್ಷಯ್ ಕುಮಾರ್ ಬಿ.ಎಸ್ ಸ್ವಾಗತಿಸಿದರು. ಅಪೇಕ್ಷ್ ವಂದಿಸಿದರು. ಗೀತಾಂಜಲಿ ಈ ಕಾರ್ಯಕ್ರಮವನ್ನು ನಿರೂಪಿಸಿದರು.
