ಅಸ್ಸಾಂ ರೈಫಲ್ಸ್ ಗೆ ‘ರಕ್ಷಿತಾ ಮಡ್ತಿಲ’ ಆಯ್ಕೆ.!

Uncategorized

ಐವರ್ನಾಡು: ಇಲ್ಲಿನ ಮಡ್ತಿಲ ಕುಟುಂಬದವರಾಗಿದ್ದು, ಪ್ರಸ್ತುತ ಧರ್ಮಸ್ಥಳದಲ್ಲಿ ನೆಲೆಸಿರುವ ಭಾಸ್ಕರ ಗೌಡ ಮಡ್ತಿಲ ಹಾಗೂ ಮಮತಾ ದಂಪತಿಯ ಪುತ್ರಿಯಾದ ಕು.ರಕ್ಷಿತಾ ಎಂ.ಬಿ.ಯವರು ಪ್ಯಾರಾ ಮಿಲಿಟರಿ ಫೋರ್ಸ್, ಅಸ್ಸಾಂ ರೈಫಲ್ಸ್‌ಗೆ ಆಯ್ಕೆಯಾಗಿದ್ದಾರೆ.

5ನೇ ತರಗತಿವರೆಗೆ ಐವರ್ನಾಡಿನ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ವ್ಯಾಸಂಗ ನಡೆಸಿ ಬಳಿಕ ಕಾರ್ಕಳದ ಅತ್ತೂರು ಸೈಂಟ್ ಲಾರೆನ್ಸ್ ಹಿ.ಪ್ರಾ. ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು, ನಿಟ್ಟೆ ಎನ್.ಎಸ್.ಎ.ಎಂ. ಪಿ.ಯು. ಕಾಲೇಜ್, ಪದವಿ ಶಿಕ್ಷಣವನ್ನು ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪೂರೈಸಿದರು. ಮಿಲಿಟರಿಗೆ ಸೇರುವ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿಕೊಂಡು ಈಗ ಅಸ್ಸಾಂ ರೈಫಲ್ಸ್‌ಗೆ ಆಯ್ಕೆಯಾಗಿದ್ದಾರೆ. ನಾಗಾಲ್ಯಾಂಡ್‌ನ ಸುಖೋವಿಯಲ್ಲಿ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಲು ಅವರು ನ್ಯಾಗಾಲ್ಯಾಂಡ್ ತಲುಪಲಿದ್ದಾರೆ ಎಂದು‌ ತಿಳಿದುಬಂದಿದೆ.

Leave a Reply

Your email address will not be published. Required fields are marked *