ಕಲ್ಲುಗುಂಡಿ: ಇಲ್ಲಿನ ಕಡಪಾಲ ಸೇತುವೆಯ ಬಳಿ ಲಾರಿಯೊಂದು ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ಕಾರು ಮಂದಿ ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ. ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು. ಇನ್ನೋರ್ವ ಗಾಯಾಳು ಬಸ್ಸಿನ ಒಳಗೆ ಸಿಲುಕಿದ್ದು, ಬಸ್ಸಿನ ಸೀಟ್‌ನ ರಾಡ್ ಕಟ್ ಮಾಡಿ ಇದೀಗ ಅವರನ್ನು ಸರಕಾರಿ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಕಡೆಗೆ ತರಲಾಯಿತೆಂದು ತಿಳಿದುಬಂದಿದೆ.

