ಸುಳ್ಯ: ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಆಶ್ರಯದಲ್ಲಿ ಸುಳ್ಯದ ಜೆ.ಓ.ಸಿ ಮೈದಾನದಲ್ಲಿ ನಡೆದ ಸುಳ್ಯ ವಿಧಾನಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದಕ್ಕೆ ಅದ್ದೂರಿ ತೆರೆ ಕಂಡಿದೆ. ಕುಕ್ಕೆಶ್ರೀ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸುಳ್ಯ ಟೈಗರ್ಸ್ ರನ್ನರ್ಸ್ ಅಪ್ ಆಗಿದೆ. ಜಿದ್ದಾ ಜಿದ್ದಿನ ಫೈನಲ್ ಪಂದ್ಯದಲ್ಲಿ ಕುಕ್ಕೆಶ್ರೀ ತಂಡ 31-27 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಕುಕ್ಕೆಶ್ರೀ ತಂಡದ ಪರವಾಗಿ ಪ್ರೊ ಕಬಡ್ಡಿ ಆಟಗಾರರಾದ ಸಚಿನ್ ಪ್ರತಾಪ್, ಮಿಥುನ್ ಗೌಡ ಮತ್ತಿತರರು ಉತ್ತಮ ಪ್ರದರ್ಶನ ನೀಡಿದರು. ಸುಳ್ಯ ಟೈಗರ್ಸ್ ತಂಡ ಕೂಡ ಅದ್ಭುತ ಪ್ರದರ್ಶನ ನೀಡಿ ಅಂಕ ಪಡೆಯುತಾ ಸಾಗಿತು. ಸಮಬಲದಲ್ಲಿ ಸಾಗಿದ ಪಂದ್ಯದಲ್ಲಿ ಅಂತಿಮ ಕ್ಷಣದಲ್ಲಿ ಕುಕ್ಕಶ್ರೀ ತಂಡ ಮುನ್ನಡೆ ಸಾಧಿಸಿ ಪಂದ್ಯ ಗೆದ್ದಿತು. 6 ತಂಡಗಳು ಪಂದ್ಯಾಕೂಟದಲ್ಲಿ ಭಾಗವಹಿಸಿತು. ಅರಂತೋಡು ಬುಲ್ಸ್ ಸುಳ್ಯ ಟೈಗರ್ಸ್, ಮಧುರಾಜ್ ಉಬರಡ್ಕ, ಕುಕ್ಕೆ ಶ್ರೀ ವಾರಿಯರ್ಸ್, ಕಲ್ಲುಗುಂಡಿ ಬ್ರದರ್ಸ್, ಮೈತ್ರಿ ಬೆಳ್ಳಾರೆ ತಂಡಗಳು ಭಾಗವಹಿಸಿದ್ದವು. ಲೀಗ್, ಪ್ಲೇ ಆಫ್ ಮಾದರಿಯಲ್ಲಿ ಪಂದ್ಯಾಟ ನಡೆಯಿತು. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಗೌರವಾಧ್ಯಕ್ಷ ಎಸ್.ಪಿ.ಲೋಕನಾಥ್ ಬಹುಮಾನ ವಿತರಿಸಿದರು.ಸಂಘದ ತಾಲೂಕು ಅಧ್ಯಕ್ಷ ಗಿರಿಧರ ಸ್ಕಂದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುರುಪ್ರಕಾಶ್ ಕೆಟರರ್ಸ್‌ನ ಜಿ.ಜಿ.ನಾಯಕ್, ಜನತಾ ಗ್ರೂಪ್ಸ್‌ನ ಕೆ.ಎಂ.ಅಬ್ದುಲ್ ಮಜೀದ್, ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾತಿ ಮೈಕ್ಸ್ ಮಾಲಕ ಜಯಪ್ರಕಾಶ್ ಭಾಗವಹಿಸಿದ್ದರು.ಖಜಾಂಜಿ ಮಧುಸೂಧನ್ ನಾಯರ್, ಜತೆ ಕಾರ್ಯದರ್ಶಿ ಶಿವಪ್ರಕಾಶ್, ಸ್ಥಾಪಕಾಧ್ಯಕ್ಷ ಹಸನ್ ಪದಾಧಿಕಾರಿಗಳಾದ ಗುರುದತ್ ನಾಯಕ್, ಶಾಫಿ ಪೈಚಾರ್, ಸತ್ಯಪ್ರಕಾಶ್, ಜಿ.ಶ್ರೀಧರ್ ಜಯನಗರ, ಜಿ.ಎ.ಮಹಮ್ಮದ್, ಸತೀಶ್ ಕಲ್ಲುಗುಂಡಿ, ಜಯಂತ್ ಮಂಡೆಕೋಲು ಮೊದಲಾದವರು ಉಪಸ್ಥಿತರಿದ್ದರು.
