ಸುಳ್ಯ: ದ.ಕ. ಜಿಲ್ಲಾ ಮೊಬೈಲ್ ರಿಟೇಲ್ ಅಸೋಸಿಯೇಶನ್‌ನರವರು ನಡೆಸುತ್ತಿರುವ ಸ್ಮಾರ್ಟ್ ಫೋನ್ ಫೆಸ್ಟ್ ಇದರ ಪ್ರಥಮ ಬಂಪರ್ ಡ್ರಾ ಅ. ೧೨ರಂದು ನಡೆಯಿತು, ಇದರ ಪ್ರಥಮ ಬಂಪರ್ ಬಹುಮಾನ ಟಿವಿಎಸ್ ಜುಪಿಟರ್ ಸುಳ್ಯದ ಕರಾವಳಿ ಮೊಬೈಲ್ಸ್‌ನ ಗ್ರಾಹಕ ‘ಮಂಜುನಾಥ ಪೈ’ಯವರಿಗೆ ಲಭಿಸಿದ್ದು, ಇದರ ಹಸ್ತಾಂತರ ಕಾರ್ಯಕ್ರಮ ನ. ೯ರಂದು ‘ಕರಾವಳಿ ಮೊಬೈಲ್ಸ್’ ನಲ್ಲಿ ನಡೆಯಿತು.


ಈ ಸಂಧರ್ಭದಲ್ಲಿ ಸುಳ್ಯ ವಾಣಿಜ್ಯ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಸುಧಾಕರ ರೈ, ದ.ಕ. ಜಿಲ್ಲಾ ಮೊಬೈಲ್ ರಿಟೇಲ್ ಅಸೋಸಿಯೇಶನ್‌ನ ಅಧ್ಯಕ್ಷ ಶೈಲೇಂದ್ರ ಸರಳಾಯ, ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ಡಾ. ಕೇಶವ ಪಿ.ಕೆ, ಕೆಂದ್ರ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಂ. ಮುಸ್ತಫಾ, ಹಾಜಿ ಎಸ್.ಅಬ್ದುಲ್ಲಾ, ಶಬೀರ್ ಒರ್‌ಕುಟ್ ಮೊಬೈಲ್, ರಹೀಂ ಮೊಬೈಲ್ ಗ್ಯಾರೇಜ್, ಹಾರಿಸ್ ಸೆಲ್‌ಹೌಸ್, ಅಬ್ದುಲ್ ರೆಹಮಾನ್, ಅಹಮ್ಮದ್ ಕರಾವಳಿ, ಅಕ್ಬರ್ ಆಲಿ ಮೊದಲಾದವರು ಉಪಸ್ಥಿತರಿದ್ದರು.
