ಸುಳ್ಯ: ಹೃದಯಾಘಾತದಿಂದ ಮೃತಪಟ್ಟ 2ನೇ ತರಗತಿ ವಿದ್ಯಾರ್ಥಿ

ಸುಳ್ಯ: ಇಲ್ಲಿನ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯ 2 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಕುಂಟಿಕಾನದ ಮೋಕ್ಷಿತ್ ಕೆ.ಸಿ. ಎಂಬ ಬಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನ.1 ರಂದು ವರದಿಯಾಗಿದೆ‌. ಬಾಲಕ ಎಂದಿನಂತೆ ಶಾಲೆಗೆ ಬಂದಿದ್ದು ನ.1 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನು.

ಮಧ್ಯಾಹ್ನದ ವೇಳೆಗೆ ಬಾಲಕನಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡ ಕಾರಣ ಶಿಕ್ಷಕರು, ಪೋಷಕರಿಗೆ ದೂರವಾಣಿ ಮೂಲಕ ಜ್ವರ ಇರುವ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ. ಬಾಲಕ ನಿಂತಲ್ಲಿಯೇ ಹಠಾತ್ತನೆ ಕುಸಿದು ಬಿದ್ದಿರುತ್ತಾನೆ. ತಕ್ಷಣ ಶಿಕ್ಷಕರು ಹಾಗೂ ಸ್ಥಳೀಯರು ಸೇರಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಬಾಲಕನಿಗೆ ಹೃದಯಾಘಾತ ಸಂಭವಿಸಿದ್ದರಿಂದ ಮೃತ ಪಟ್ಟಿರುವುದಾಗಿ ತಿಳಿಸಿದರೆಂದು ತಿಳಿದು ಬಂದಿದೆ.

ಬಾಲಕನ ತಂದೆ ಚಂದ್ರಶೇಖರ ಆಚಾರ್ಯ ಕುಂಟಿಕಾನ ಅದೇ ಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾಗಿದ್ದು, ತಾಯಿ ಗೀತಾ ಮತ್ತು ಓರ್ವ ಸಹೋದರ ಅಕ್ಷಯ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾನೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ