ಸುಳ್ಯ : ಇಂದಿನ ಕಾಲದಲ್ಲಿ ಅತೀಹೆಚ್ಚು ಯುವ ಪೀಳಿಗೆ ಮಾದಕ ವ್ಯಸನದಿಂದ ಬಾಳನ್ನು ಹಾಳು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಿಂದ ಇತಂಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಪಾಣಕ್ಕಾಡ್ ತಂಙಳ್ ರವರು ನೇತೃತ್ವದಲ್ಲಿ ಹಿರಿಯ ಸಾದಾತ್ ರವರ ಮಾರ್ಗದರ್ಶನ ದಲ್ಲಿ ಇತಂಹ ಮಾದಕ ದ್ರವ್ಯ ವ್ಯಸನದ ವಿರೋಧ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದಂದು ಹಮ್ಮಿಕೊಂಡ ಕಾರ್ಯಕ್ರಮವು ದೇಶಕ್ಕೆ ಮಾದರಿಯಾಗಿದೆ ಎಂದು ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್ ಶಹೀದ್ ಹೇಳಿದರು. ಅವರು ಕನ್ನಡ ರಾಜ್ಯೋತ್ಸವ ಅಂಗವಾಗಿ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್ ವತಿಯಿಂದ ಅರಂಬೂರಿನಲ್ಲಿ ನಡೆದ ಮಾದಕ ವ್ಯಸನದ ಕುರಿತು ಜನ ಜಾಗೃತಿ ಮಾಡಿಸುವ ಜನ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಕ್ಲಸ್ಟರ್ ಅಧ್ಯಕ್ಷ ಸಿದ್ದೀಖ್ ಜೀರ್ಮುಕಿ ವಹಿಸಿದರು. ಕಾರ್ಯಕ್ರಮದಲ್ಲಿ ಪೇರಡ್ಕ ಮುಹಿಯ್ಯದೀನ್ ಜುಮ್ಮಾ ಮಸೀದಿ ಖತೀಬರಾದ ರಿಯಾಝ್ ಫೈಝಿ ದುವಾ ನೇರವೇರಿಸಿದರು.
ಮಾದಕ ವ್ಯಸನ ಮುಕ್ತವಾಗಲು ಸರ್ವರೂ ಸಹಕರಿಸಿದರೇ ಮಾತ್ರ ಸಾಧ್ಯ:
ಸುಳ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ ಮಾತನಾಡಿ ರಾಜ್ಯೋತ್ಸವದಂದು ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಬಹಳ ಅಗತ್ಯತೆ ಹಾಗೂ ಅನಿವಾರ್ಯವಾಗಿದೆ. ಇದು ಕೇವಲ ಸಂಘಟನೆಯಿಂದ ಸಾಧ್ಯವಾಗುವುದಿಲ್ಲ ಇಂತಹ ಮಾದಕ ವ್ಯಸನ ನಿರ್ಮೂಲನೆ ಮಾಡಲು ಸರ್ವರೂ ಒಗ್ಗೂಡಿದಾಗ ಮಾತ್ರ ಸಾಧ್ಯ ಎಂದು ಹೇಳಿದರು.
ಜನರಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು:
ಸಂದೇಶ ಭಾಷಣದಲ್ಲಿ ಸಾಧಿಖ್ ಕಲ್ಲೋಣಿ ಮಾತನಾಡಿ ಮಾದಕ ದ್ರವ್ಯ ಪೀಡಿತರಾಗಿ ಬಳಲುತ್ತಿರುವವರ ಸಮಸ್ಯೆಗಳು ಅವರ ನಂಬಿದ ಕುಟುಂಬ ಬೀದಿ ಪಾಲಾಗುತ್ತಿರುವುದನ್ನು ತಡೆಯುವುದರ ಕುರಿತು ಮತ್ತು ಅಮಲು ಪದಾರ್ಥ ಸೇವಿಸಿ ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದನ್ನು ತಪ್ಪಿಸಲು ಜನರಲ್ಲಿ ಜನ ಜಾಗೃತಿ ಮೂಡಿಸಿ ಮಾದಕ ಮುಕ್ತ ಸಮಾಜ ಹಾಗೂ ಶಾಂತಿಯುತ ಬದುಕು ನಿರ್ಮಾಣಕ್ಕಾಗಿ ಇಂತಹ ಕಾರ್ಯಕ್ರಮ ವನ್ನು ಎಸ್ ಕೆ ಎಸ್ ಎಸ್ ಎಫ್ ಹಮ್ಮಿಕೊಂಡಿದೆ ಎಂದು ವಿವರಿಸಿದರು. ಜಿಲ್ಲೆಯ 35 ಕೇಂದ್ರದಲ್ಲಿ ಈ ಕಾರ್ಯಕ್ರಮ ಏಕ ಕಾಲದಲ್ಲಿ ನಡೆಯುತ್ತಿದೆ ಎಂದು ಸಾದಿಖ್ ಕಲ್ಲೊಣಿ ಹೇಳಿದರು.
ಸಮಾಜದಲ್ಲಿ ಒಗ್ಗೂಡಿ ಬಾಳಬೇಕಾದ ನಾವು ಧರ್ಮದ ಹೆಸರಿನಲ್ಲಿ ಕಚ್ಚಾಟವನ್ನು ಮಾಡಿ ಜನರಲ್ಲಿ ಸೌಹಾರ್ದತೆ ಇಲ್ಲದಂತೆ ಮಾಡಿದೆ. ಸಮಾಜದಲ್ಲಿ ವಿದ್ಯಾರ್ಥಿಗಳು ಯುವಕರು ಮಾದಕ ವ್ಯಸನಿಗಳಾಗಿ ಅತೀ ಹೆಚ್ಚು ಅಡಿಕ್ಟ್ ಅಗಿದ್ದಾರೆ. ಶಾಲಾ ವಿದ್ಯಾರ್ಥಿಗಳು ಸಿಗರೇಟು ಗುಟ್ಕಾ ಇನ್ನಿತರ ಮಾದಕ ವಸ್ತುವನ್ನು ಸೇವಿಸಿ ಹಿರಿಯರನ್ನು ಗೌರವಿಸುದನ್ನು ಮರೆತು ಹೋಗಿದ್ದಾರೆ ಎಂದು ಅಲೆಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತೀರ್ಥಪ್ರಸಾದ್ ಹೇಳಿದರು. ವೇದಿಕೆಯಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಸುದ್ದೀನ್ ಎಸ್ , ಅರಂಬೂರು ಜುಮ್ಮಾ ಮಸೀದಿ ಅಧ್ಯಕ್ಷ ಬಾಷಾ ಸಾಹೇಬ್, ಹಿರಿಯ ಸಹಕಾರಿ ಬಾಪು ಸಾಹೇಬ್, ಸುಳ್ಯ ಎಸ್ ಎಮ್ ಎಫ್ ಅಧ್ಯಕ್ಷ ಹಮೀದ್ ಹಾಜಿ ಸುಳ್ಯ, ತಾಲ್ಲೂಕು ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಪೇರಡ್ಕ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಲಿ ಎಸ್, ಸುಳ್ಯನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಸುಳ್ಯ ಕ್ಲಸ್ಟರ್ ಕೊಶಾಧಿಕಾರಿ ಹಾಜಿ ರಜಾಕ್ ಕರಾವಳಿ, ಸುಳ್ಯ ವಲಯ ಕಾರ್ಯದರ್ಶಿ ಅಶೀಕ್ ಸುಳ್ಯ , ಸುಳ್ಯ ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿ ಅಕ್ಬರ್ ಕರಾವಳಿ, ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕಂಬಳ, ಪೇರಡ್ಕ ಜುಮ್ಮಾಮಸೀದಿ ಕಾರ್ಯದರ್ಶಿ ರಜಾಕ್ ಹಾಜಿ, ಸುಳ್ಯ ಕ್ಯಾಂಪಸ್ ಕಾರ್ಯದರ್ಶಿ ನಾಸಿರ್ ಮಾಂಬ್ಳಿ, ಅಬ್ದುಲ್ಲಾ ಅರಂಬೂರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ನಿಸಾರ್ ಪಾಲಡ್ಕ ಪ್ರತಿಜ್ಞೆ ಬೋಧಿಸಿದರು. ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.