
ಕೊಚ್ಚಿ: ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡಿನ ವಿರುದ್ಧ ಕೇರಳ ಮೂಲದ ಜನಪ್ರಿಯ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ದಾಖಲಿಸಿದ್ದ ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆ ವಿಚಾರಣೆ ನಡೆಸಿದ ನ್ಯಾಯಾಲಯ, ಹಾಡನ್ನು ಪ್ಲೇ ಮಾಡದಂತೆ ಸ್ಟ್ರೀಮಿಂಗ್ ಫ್ಲಾಟ್‌ಫಾರ್ಮ್‌ಗಳಿಗೆ ತಡೆಯಾಜ್ಞೆ ನೀಡಿದೆ.

2015 ರಲ್ಲಿ ಬಿಡುಗಡೆಯಾದ ಥಕ್ಕುಡಂ ಬ್ರಿಡ್ಜ್‌ನ ‘ನವರಸಂ’ ಹಾಗೂ ಕಾಂತಾರ ಚಿತ್ರದ ವರಾಹ ರೂಪಂ ಹಾಡು ನಡುವೆ ಸಾಕಷ್ಟು ‘ಸಾಮ್ಯತೆ’ ಇದೆ ಎಂದು ಆರೋಪಿಸಲಾಗಿದೆ.

ಕೇರಳದ ನ್ಯಾಯಾಲಯ ನೀಡಿದ ಈ ತಡೆಯಾಜ್ಞೆ ಬಗ್ಗೆ ಇನ್ಸ್‌ಟ್ರಾಗ್ರಾಂನಲ್ಲಿ ಸ್ವತಃ ಥೈಕುಡಂಬ್ರಿಡ್ಜ್ ಪೇಜ್ ನಲ್ಲಿ ಹಂಚಿಕೊಂಡಿದ್ದು, “ಎಲ್ಲರ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಹೇಳಿದೆ.