ಸಂಸತ್‌ ಭದ್ರತಾ ಲೋಪ:ಆರನೇ ಆರೋಪಿಯ ಬಂಧನ

ಸಂಸತ್ ನಲ್ಲಿ ಕಳೆದ ಬುಧವಾರ ನಡೆದ ಭದ್ರತಾ ಲೋಪ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ದೆಹಲಿ ಪೊಲೀಸರು ಆರನೇ ಆರೋಪಿಯನ್ನು ಬಂಧಿಸಿದ್ದು, ಆತನನ್ನು ಮಹೇಶ್ ಕುಮಾವತ್ ಎಂದು ಗುರುತಿಸಲಾಗಿದೆ. ರಾಜಸ್ಥಾನದ ನಾಗೌರ್ ಜಿಲ್ಲೆಯ ನಿವಾಸಿಯಾದ ಈತ ಡಿ. 13ರಂದು ದೆಹಲಿಗೆ ಆಗಮಿಸಿದ್ದ ಎನ್ನಲಾಗಿದೆ. ಈತ ಪ್ರಕರಣದ ಪಿತೂರಿಯ ಭಾಗವಾಗಿದ್ದ ಎಂದು ಖಚಿತಪಡಿಸಿ ಶನಿವಾರ ಪೊಲೀಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.ಡಿ.೧೩ ರಂದು ಸಂಸತ್‌ ಭವನದಲ್ಲಿ ನಡೆಯುತ್ತಿದ್ದಲೋಕಸಭೆ ಕಲಾಪಕ್ಕೆ ನುಗ್ಗಿ ಹಳದಿ ಹೊಗೆ ಬಾಂಬ್‌ ಸಿಡಿಸಿದ್ದರು, ಅಲ್ಲದೇ ಸಂಸದರು ಕುಳಿತಿದ್ದ ಕಡೆ ಆರೋಪಿಗಳು ಜಿಗಿದಿದ್ದರು.

ಘಟನೆಯ ಬಳಿಕ ಈ ಕೃತ್ಯದ ಪ್ರಮುಖ ಸಂಚುಕೋರ ಲಲಿತ್ ಝಾ ದೆಹಲಿಯಿಂದ ಪರಾರಿಯಾಗಿದ್ದ.ರಾಜಸ್ಥಾನದಲ್ಲಿ ಮಹೇಶ್ ಅಡಗುತಾಣವಾಗಿತ್ತು. ಆರಂಭದಲ್ಲಿ ಬಂಧಿತ ನಾಲ್ವರು ಆರೋಪಿಗಳ ಮೊಬೈಲ್ ಫೋನ್ ಗಳನ್ನು ನಾಶಪಡಿಸುವಲ್ಲಿ ಮಹೇಶ್ , ಲಲಿತ್ ಜೊತೆ ಸೇರಿಕೊಂಡಿದ್ದ ಎಂದು ಮಾಹಿತಿ ಹೊರಬಿದ್ದಿದೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ