ಸಾರ್ವಜನಿಕರೇ ಬೀ ಕೇರ್‌ಫುಲ್ – ರಾಜ್ಯದಲ್ಲಿ ಇದ್ದಾರೆ ಬರೋಬ್ಬರಿ 1,436 ನಕಲಿ ವೈದ್ಯರು

ಬೆಂಗಳೂರು: ಭ್ರೂಣ ಹತ್ಯೆ ಮಧ್ಯೆ ನಕಲಿ ವೈದ್ಯರ (Fake Doctors) ಹಾವಳಿ ಹೆಚ್ಚಾಗುತ್ತಿದೆ. ಸದನದಲ್ಲಿ ಕೂಡ ನಕಲಿ ವೈದ್ಯರ ವಿಚಾರವಾಗಿ ಆರೋಗ್ಯ ಇಲಾಖೆಯನ್ನು (Health Department) ಪ್ರಶ್ನಿಸುತ್ತಾ ಇದ್ದಾರೆ. ಸ್ಕ್ಯಾನಿಂಗ್ ಸೆಂಟರ್‌ಗಳ ಜೊತೆ ನಕಲಿ ವೈದ್ಯರಿಗೆ ಆರೋಗ್ಯ ಇಲಾಖೆ ಬಲೆ ಬೀಸಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಭ್ರೂಣ ಹತ್ಯೆ ಮತ್ತು ನಕಲಿ ವೈದ್ಯರ ವಿಷಯ ಚರ್ಚೆ ಆಗುತ್ತಿದೆ. ಭ್ರೂಣ ಹತ್ಯೆ ಮತ್ತು ನಕಲಿ ವೈದ್ಯರಿಗೆ ಕಡಿವಾಣ ಹಾಕಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯುತ್ತಿದ್ದಾರೆ. ಹೀಗಾಗಿ ಎಚ್ಚೆತ್ತಿರುವ ಆರೋಗ್ಯ ಇಲಾಖೆ ಸ್ಕ್ಯಾನಿಂಗ್ ಸೆಂಟರ್ ಮತ್ತು ನಕಲಿ ವೈದ್ಯರ ಮೇಲೆ ದಾಳಿ ಮಾಡಿ ಡಿಸೆಂಬರ್ 32ರ ಒಳಗಡೆ ವರದಿ ಸಲ್ಲಿಸಲು ಸೂಚಿಸಿದೆ. ಈಗಾಗಲೇ ರಾಜ್ಯದಲ್ಲಿ ನಕಲಿ ವೈದ್ಯರ ಬಗ್ಗೆ ಆರೋಗ್ಯ ಇಲಾಖೆ ವರದಿ ಕಲೆ ಹಾಕಿದ್ದು, ರಾಜ್ಯದ 31 ಜಿಲ್ಲೆಗಳಲ್ಲೂ ಬರೋಬ್ಬರಿ 1,436 ನಕಲಿ ವೈದ್ಯರು ಇದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ. ಇನ್ನೂ ಸಾರ್ವಜನಿಕರೇ ನಕಲಿ ವೈದ್ಯರನ್ನು ಪತ್ತೆ ಹಚ್ಚುವಲ್ಲಿ ಸಹಕಾರ ಕೊಡಬೇಕು ಎನ್ನುತ್ತಾರೆ. ಬೇರೆ ಬೇರೆ ರಾಜ್ಯಗಳಿಂದ ಬೈಕ್‌ಗಳಲ್ಲಿ ಬಂದು ಇಂಜೆಕ್ಷನ್ ಕೊಟ್ಟು ಹೋಗುತ್ತಾರೆ. ಈ ರೀತಿಯ ಜಾಲ ಇದ್ದು, ಅಂತಹ ನಕಲಿ ವೈದ್ಯರನ್ನು ಪಟ್ಟಿ ಮಾಡಿದ್ದಾರೆ. 31 ಜಿಲ್ಲೆಗಳಲ್ಲಿ ಒಟ್ಟು 1,436 ನಕಲಿ ವೈದ್ಯರಿದ್ದು, ಯಾವ ಜಿಲ್ಲೆಯಲ್ಲಿ ಹೆಚ್ಚು ನಕಲಿ ವೈದ್ಯರಿದ್ದಾರೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.


ಯಾವ ಜಿಲ್ಲೆಯಲ್ಲಿ ಎಷ್ಟು ನಕಲಿ ವೈದ್ಯರು?
ಬೀದರ್ – 423
ಕೋಲಾರ – 179
ಬೆಳಗಾವಿ – 170
ಶಿವಮೊಗ್ಗ – 74
ಬೆಂಗಳೂರು ನಗರ – 67
ಧಾರವಾಡ – 70
ಕಲಬುರಗಿ – 81
ಮಂಡ್ಯ – 33
ಮೈಸೂರು – 2
ಕೊಪ್ಪಳ – 33
ಚಾಮರಾಜನಗರ – 51
ಚಿಕ್ಕಬಳ್ಳಾಪುರ – 45
ಬರೀ 1,436 ನಕಲಿ ವೈದ್ಯರು ಅಷ್ಟೇ ಇಲ್ಲ ಇನ್ನೂ ಹೆಚ್ಚಿದ್ದಾರೆ. ಕೆಲವೊಂದಿಷ್ಟು ಜನ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಅವರನ್ನ ಪತ್ತೆ ಮಾಡುವಂತಹ ಕೆಲಸ ಮಾಡುತ್ತಿದ್ದು, ಡಿಸೆಂಬರ್ 31ರ ಒಳಗೆ ಇನ್ನಷ್ಟು ನಕಲಿ ವೈದ್ಯರು ಬೆಳಕಿಗೆ ಬರುತ್ತಾರ ಎಂದು ಕಾದುನೋಡಬೇಕಿದೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ