ಜೀವಧಾನಿಗಳಾದ 44 ಜನಸ್ನೇಹಿ ರಕ್ತದಾನಿಗಳು. ಫ್ರೆಂಡ್ಸ್ ಕ್ಲಬ್ (ರಿ.) ಬಲ್ನಾಡ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಸಹಾಭಾಗಿತ್ವದಲ್ಲಿ ಮರ್ಹೂಂ ಅಬ್ದುಲ್ ಅಝೀಝ್ ಬಲ್ನಾಡ್ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 27 ಅಕ್ಟೋಬರ್ 2022 ನೇ ಗುರುವಾರ ಪುತ್ತೂರಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಭಕ್ತಿ ತುಂಬಿದ ದುವಾದ ಮೂಲಕ RJM ಬಲ್ನಾಡ್ ಖತೀಬರಾದ ಬಹು ಉಮರ್ ಅಝ್ಹರಿ ಉಸ್ತಾದ್ ಆರಂಭಿಸಿದರು. ಮಾಡನ್ನೂರು ಜುಮಾ ಮಸ್ಜಿದ್ ಖತೀಬ್ ಬಹು ಸಿರಾಜುದ್ದೀನ್ ಫೈಝೀ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮರ್ಹೂಂ ಅಝೀಝ್ ಬಲ್ನಾಡ್ ಅವರ ಸಾಮಾಜಿಕ ಕಾರ್ಯ ವೈಖರಿಯನ್ನು ಕೊಂಡಾಡಿದರು. ಅಝೀಝ್ ಅವರ ಸ್ಮರಣಾರ್ಥ ಈ ದಿನಕ್ಕೆ ಮಾತ್ರ ಸೀಮಿತವಾಗದೆ ಪ್ರತಿ ಸಂದರ್ಭಗಳಲ್ಲೂ ಅವರನ್ನು ಸ್ಮರಿಸುವಂತಾಗಬೇಕೆಂದು ಹೇಳಿದರು.

ಸುರಿಬೈಲ್ ಕೇಂದ್ರ ಜುಮಾ ಮಸ್ಜಿದ್ ಖತೀಬರಾದ ಬಹು ಮೊಹಮ್ಮದ್ ಸಖಾಫಿ ಉಸ್ತಾದರು ಪ್ರಾಸ್ತವಿಕ ನುಡಿಗಳನ್ನಾಡಿದರು. ಬಳಿಕ ಮಾತನಾಡಿದ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ವೈದ್ಯಧಿಕಾರಿ ಡಾ. ರಾಮಚಂದ್ರ ಭಟ್ ರಕ್ತದಾನದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ RJM ಬಲ್ನಾಡ್ ಆಡಳಿತ ಸಮಿತಿಯ ಅಧ್ಯಕ್ಷರಾದ ಇಸ್ಮಾಯಿಲ್ ನಾಟೆಕಲ್, ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಪಳ್ಳಿಕೆರೆ, ಪ್ರಾಧ್ಯಾಪಕರಾದ ಹಂಝ ಮದನಿ ಹಾಗೂ ಉಸ್ಮಾನ್ ಮುಸ್ಲಿಯಾರ್ ಬಲ್ನಾಡ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಿದ್ದೀಕ್ ಬೀಟಿಗೆ ನಿರೂಪಿಸಿದರು. ಒಟ್ಟು 44 ಮಂದಿ ರಕ್ತದಾನ ಮಾಡಿ ಜೀವಧಾನಿಗಳಾದರು. ರಕ್ತವನ್ನು ಸಂಗ್ರಹಿಸುವಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರಿನ ಸಿಬ್ಬಂದಿ ವರ್ಗದವರು ಸಹಕರಿಸಿದರು.