ಪೈಚಾರ್: ವಾಹನ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ಸಾವು

ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ಸಂದರ್ಭ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡು ಮೃತಪಟ್ಟ ಘಟನೆ ಪೈಚಾರಿನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಗದಗ ತಾಲೂಕು ಹೊಸೂರು ಗ್ರಾಮದ ಹುಸೇನಸಾಬ ಹೆಬಸುರ (45) ಮೃತಪಟ್ಟ ವ್ಯಕ್ತಿ . ಇವರು ಬೆಳ್ತಂಗಡಿಯಲ್ಲಿ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಡಿಕೇರಿಯಲ್ಲಿ ಕಾರ್ಯಕ್ರಮವೊಂದಕ್ಕೆ ಅಳವಡಿಸಲಾಗಿದ್ದ ಶಾಮಿಯಾನವನ್ನು ತರಲೆಂದು ಮಡಿಕೇರಿಗೆ ಗುರುವಾರ ರಾತ್ರಿ ಹೊರಟ್ಟಿದ್ದರು. ವಾಹನ ಸುಳ್ಯದ ಪೈಚಾರು ಸಮೀಪ ಬರುತ್ತಿದ್ದಂತೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು ಅಲ್ಲೇ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಬಳಿಯಲ್ಲಿ ಕುಳಿತಿದ್ದ ವ್ಯಕ್ತಿಗೆ ವಿಷಯ ತಿಳಿಸಿದ್ದಾರೆ. ಆತ ತಕ್ಷಣ ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮೃತಪಟ್ಟಿದ್ದಾರೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ