V4 ಫ್ರೆಂಡ್ಸ್ ಸೌಹಾರ್ದ ಟ್ರೋಫಿ; ಚಾಂಪಿಯನ್ ಆಶೀರ್ವಾದ್ ಅಲೆಕ್ಕಾಡಿ,

ಡಿ.10, ಸುಳ್ಯ: V4 ಫ್ರೆಂಡ್ಸ್ ಸುಳ್ಯ ವತಿಯಿಂದ 16 ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂವು ಸುಳ್ಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಜೂನಿಯರ್ ಕಾಲೇಜು ಎಸ್ ಡಿ ಎಂ ಸಿ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ ಪಂದ್ಯಾಕೂಟವನ್ನು ಉದ್ಘಾಟಿಸಿದರು. ಹಿರಿಯ ಪಿಗ್ಮಿ ಸಂಗ್ರಾಹಕ ಸಮರ್ಥ ನಿಧಿ ಲಿಮಿಟೆಡ್ ಸುಳ್ಯ ಗೋಪಾಲ ಮಣಿಯಾಣಿ ಹಾಗೂ ಸದಾಶಿವ ರಾವ್ , ರಾಜ್ ಸೌಂಡ್ಸ್ & ಲೈಟಿಂಗ್ಸ್ ಮ್ಹಾಲಕ ರಾಜೇಶ್ ರೈ ಉಪಸ್ಥಿತರಿದ್ದರು, ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು V4 ಫ್ರೆಂಡ್ಸ್ ಸುಳ್ಯ ಅಧ್ಯಕ್ಷ ಪುನೀತ್ ಸುಳ್ಯಇವರು ವಹಿಸಿದ್ದರು.

ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಫೈನಲ್ ಪಂದ್ಯಕ್ಕೆ ಆಶಿರ್ವಾದ್ ಅಲೆಕ್ಕಾಡಿ ಮತ್ತು ಬ್ರದರ್ಸ್ ಬಾಕಿಲ ತಲುಪಿತು. ಇತ್ತಂಡಗಳ ರೋಚಕ ಹಣಾ ಹಣಿಯಲ್ಲಿ ಆಶಿರ್ವಾದ್ ಅಲೆಕ್ಕಾಡಿ 2023ರ ಸೌಹಾರ್ದ ಟ್ರೋಫಿ ತನ್ನ ಮುಡಿಗೇರಿಸಿಕೊಂಡಿತು. ರನ್ನರ್ ಅಪ್ ಪ್ರಶಸ್ತಿಯನ್ನು ಬ್ರದರ್ಸ್ ಬಾಕಿಲ ಪಡೆದುಕೊಂಡಿತು. ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕೆ.ವಿ.ಜಿ. ಆಯುರ್ವೇದ ಕಾಲೇಜು ಸುಳ್ಯ ಇದರ ಅಸೋಸಿಯೆಟ್ ಪ್ರೋಫೆಸರ್ ಡಾ. ಲಕ್ಷ್ಮೀಶ ಕೆ.ಎಸ್ ಪೆರಾಜೆ ಮಾತನಾಡಿ ಕ್ರೀಡೆಯಿಂದ ಸೌಹಾರ್ದ ಮತ್ತು ಗೆಳೆತನ ನೆಲೆಗೊಳ್ಳುತ್ತದೆ ಎಂದು ಅಭಿಪ್ರಾಯ ಪಟ್ಟರು.

ಸಮರ್ಥ ನಿಧಿ ಲಿಮಿಟೆಡ್ ಸುಳ್ಯ ಶಾಖಾ ವ್ಯವಸ್ಥಾಪಕ ಶ್ರೀ ಹರಿಪ್ರಸಾದ್ ಎನ್.ಆರ್,ಕಡಲು ಫ್ರೆಶ್ ಮಾರ್ಟ್ ಸುಳ್ಯ ಇದರ ಶ್ರೀ ನಿಖೇಶ್ ಉಬರಡ್ಕ, V4 ಫ್ರೆಂಡ್ಸ್ ಸುಳ್ಯ ಉಪಾಧ್ಯಕ್ಷ ಚೇತನ್ ಅರಂತೋಡು,ಜಯಲಕ್ಷ್ಮೀ ಟಯರ್ ವರ್ಕ್ಸ್ ಹಳೆಗೇಟು ಸುಳ್ಯ ಇದರ ಲೋಕೇಶ್ ಮುಂತಾದವರು ಸಮರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ