ಮದ್ಯಮುಕ್ತ ಗ್ರಾಮಕ್ಕಾಗಿ, ಕೊಲ್ಲಮೊಗ್ರ ನಿವಾಸಿಗಳು ದೈವಗಳ ಮೊರೆ ಹೋಗಿದ್ದಾರೆ.


ಕಳೆದ 18 ವರ್ಷಗಳಿಂದ ಮದ್ಯಮುಕ್ತವಾಗಿ ಹಾಗೂ ನೆಮ್ಮದಿಯಿಂದ ಇದ್ದ ಕೊಲ್ಲಮೊಗ್ರ ಗ್ರಾಮದಲ್ಲಿ ವೈನ್ ಶಾಪ್ ಆರಂಭವಾಗಿರುವುದಕ್ಕೆ ಪರ ವಿರೋಧ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಗ್ರಾಮದ ಜನರಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಗೊತ್ತಿಲ್ಲದ್ದೆ ಏಕಾ ಏಕಿ ಮದ್ಯದಂಗಡಿ ತೆರೆದಿರುವುದು ಮದ್ಯ ವಿರೋಧಿ ಹೋರಾಟ ಸಮಿತಿಯ ಆಕ್ರೋಶಕ್ಕೆ ಕಾರಣವಾಗಿದೆ.

ಮದ್ಯ ವಿರೋಧಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಗ್ರಾಮದ ಕಾರ್ಣಿಕ ದೈವಗಳಾದ ಗಡಿಕಲ್ಲು ಶ್ರೀ ವಿಷ್ಣುಮೂರ್ತಿ ದೈಸ್ಥಾನ, ಮಿತ್ತೋಡಿ ಪುರುಷ ದೈವ ಹಾಗೂ ನಿಲ್ಕೂರು ಶ್ರೀ ಶಿರಾಡಿ ದೈವಸ್ಥಾನದಲ್ಲಿ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದರು.