ಕಾಸರಗೋಡು: ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು

ಕಾಸರಗೋಡು: ಡಿ 09: ಲಾರಿಯಡಿಗೆ ಸಿಲುಕಿ ಚಾಲಕ ಮೃತ ಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಬದಿಯಡ್ಕ ಸಮೀಪದ ನೀರ್ಚಾಲ್ ಗೋಳಿಯಡ್ಕ ದಲ್ಲಿ ಎಂಬಲ್ಲಿ ನಡೆದಿದೆ. ಪಾಡಿ ಉತ್ತರತ್ತೋಡಿಯ ಮುಹಮ್ಮದ್ ನೌಫಲ್ (23) ಮೃತಪಟ್ಟ ದುರ್ದೈವಿ. ಲಾರಿಯನ್ನು ಸ್ಟಾರ್ಟ್ನಲ್ಲಿರಿಸಿ ಗೇಟ್ ತೆರೆಯಲು ಹೋದ ಸಂದರ್ಭದಲ್ಲಿ ಅದೇ ಲಾರಿ ಮುಂದಕ್ಕೆ ಸಂಚರಿಸಿ ಲಾರಿಯಡಿಗೆ ಸಿಲುಕಿ ಈ ದಾರುಣ ಘಟನೆ ನಡೆದಿದೆ. ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಈ ಅಪಘಾತ ಸಂಬಂದಿಸಿದಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ