ಮೀಫ್ ಬೆಳ್ತಂಗಡಿ ತಾಲೂಕು ಎಸ್. ಎಸ್. ಎಲ್.ಸಿ ಕಾರ್ಯಾಗಾರ
ಶಿಕ್ಷಣ


ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸೃತ ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ವತಿಯಿಂದ ಬೆಳ್ತಂಗಡಿ ತಾಲೂಕಿನ ಎಸ್. ಎಸ್. ಎಲ್.ಸಿ ವಿದ್ಯಾರ್ಥಿಗಳಿಗೆ “ಪೂರ್ವಸಿದ್ಧತಾ ಶಿಬಿರ” ಗೇರುಕಟ್ಟೆ ಮನ್‌ಶರ್ ವಿದ್ಯಾ ಸಂಸ್ಥೆಯಲ್ಲಿ ಜರುಗಿತು. ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷರು ಮೂಸಬ್ಬ ಪಿ. ಬ್ಯಾರಿ ವಹಿಸಿ ಮಾತನಾಡಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ೧೦ ಕೇಂದ್ರಗಳಲ್ಲಿ ಎಸ್. ಎಸ್. ಎಲ್.ಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ಈ ಬಾರಿ ದ.ಕ. ಜಿಲ್ಲೆಯನ್ನು ಅಗ್ರಸ್ಥಾನಕ್ಕೇರಿಸಲು ಶಿಕ್ಷಣ ಇಲಾಖೆಯೊಂದಿಗೆ ಮೀಫ್ ಕೈ ಜೋಡಿಸಲಿದೆ ಎಂದರು.
ಶಿಬಿರವನ್ನು ಉದ್ಘಾಟಿಸಿದ ರಾಷ್ಟೀಯ ತರಬೇತುದಾರರಾದ ಪ್ರೊಫೆಸರ್ ರಾಜೇಂದ್ರ ಭಟ್ ಮಾತನಾಡಿ ಮನ್ ಶರ್ ವಿದ್ಯಾಸಂಸ್ಥೆಯು ಮಾದರಿ ಸಂಸ್ಥೆಯಾಗಿದ್ದು ಅಸಯ್ಯದ್ ಉಮರ್ ಫಾರೂಕ್ ತಂಞಳ್ ರವರ ಸಾಮಾಜಿ ಕ ಮತ್ತು ಧಾರ್ಮಿಕ ನೇತೃತ್ವ ಇಲ್ಲಿನ ವಿದ್ಯಾರ್ಥಿಗಳನ್ನು ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಲು ಸಹಕಾರಿಯಾಗಿದೆ ಎಂದರು.


ಮುಖ್ಯ ಅತಿಥಿಗಳಾಗಿ ಮೀಫ್ ಉಪಾಧ್ಯಕ್ಷ ಮುಸ್ತಫಾ ಸುಳ್ಯ ಭಾಗವಹಿಸಿದ್ದರು. ವೇದಿಕೆಯಲ್ಲಿ ಮೀಫ್ ಪ್ರೋಗ್ರಾಮ್ ಸೆಕ್ರೆಟರಿ ಶಾರಿಕ್ ಕುಂಜತ್ತಬೈಲು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ನಜೀರ್ ಉಪಸ್ಥಿತರಿದ್ದರು. ಮನ್‌ಶರ್ ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ಧಾಳ , ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಡಳಿತಾಧಿಕಾರಿ ರಶೀದ್ ಕುಪ್ಪೆಟ್ಟಿ ವಂದಿಸಿದರು. ಶಾಲಾ ಶಿಕ್ಷಕಿಯರಾದ ಉಷಾ ಮತ್ತು ಗೌತಮಿ ಶರಣ್ ಕಾರ್ಯಕ್ರಮ ನಿರೂಪಿಸಿದರು. ಮೀಫ್ ವ್ಯವಸ್ಥಾಪಕ ಅಮೀನ್ ಸಹಕರಿಸಿದರು.


ಶಿಬಿರದ ಪ್ರಮುಖಾಂಶಗಳು:-
ಶಿಬಿರದಲ್ಲಿ ಸುಮಾರು ೩೫೦ ಕ್ಕು ಮಿಕ್ಕಿದ ವಿದ್ಯಾರ್ಥಿಗಳು ಬೆಳ್ತಂಗಡಿ ತಾಲೂಕಿನ ಖಾಸಗಿ ಅನುದಾನರಹಿತ ಮೀಫ್ ಶಿಕ್ಷಣ ಸಂಸ್ಥೆಯಿಂದ ಮತ್ತು ಅನುದಾನಿತ ಹಾಗೂ ಸರಕಾರಿ ಸ್ಥಳೀಯ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳೂ ಭಾಗವಹಿಸಿದ್ದರು.
ರಾಷ್ಟ್ರೀಯ ತರಬೇತುದಾರ ಮತ್ತು ಟಿ.ವಿ. ಚಾನಲ್ ನಿರೂಪಕ ಪ್ರೊ. ರಾಜೇಂದ್ರ ಭಟ್ ಕಾರ್ಕಳ ದಿನಪೂರ್ತಿ ಪ್ರಾತ್ಯಕ್ಷಿಕೆಯೊಂದಿಗೆ ವಿಷಯವಾರು ಮತ್ತು ಪ್ರೇರಣಾ ಶಿಬಿರ ನಡೆಸಿಕೊಟ್ಟರು. ಶಿಬಿರಾರ್ಥಿಗಳಿಗೆ ಊಟ, ಉಪಹಾರ ವ್ಯವಸ್ಥೆಯನ್ನು ಮನ್ ಶರ್ ವಿದ್ಯಾಸಂಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ