ತ್ವಯ್ಬಾ ಯೂತ್ ವಿಂಗ್ ಗಾಂಧಿನಗರ: ಇಸ್ಲಾಮಿಕ್ ಕಥಾ ಪ್ರಸಂಗ; ಬೃಹತ್ ಸಂಖ್ಯೆಯಲ್ಲಿ ಸೇರಿದ ಕೇಳುಗರು

ತ್ವಯ್ಬಾ ಯೂತ್ ವಿಂಗ್ ಗಾಂಧಿನಗರ ಇದರ ಆಶ್ರಯದಲ್ಲಿ ಡಿಸೆಂಬರ್ 05 ರಂದು ಗಾಂಧಿನಗರದ ಪೆಟ್ರೋಲ್ ಬಂಕ್ ಮುಂಭಾಗದ ಗಾಂಧಿ ಮೈದಾನದಲ್ಲಿ ಝುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಅವರಿಂದ “ಮರಣಂ ವಿದಿಚ್ಚ ಪೂಂದೋಟ್ಟಂ” ಎಂಬ ವಿಷಯದ ಬಗ್ಗೆ ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಿತು. ಹೆಚ್ಚಿನ ಸಂಖ್ಯೆಯ ಜನರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು, ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯ ಕಲ್ಪಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಂ ಹಾಜಿ ಕಮ್ಮಡಿಯವರು ವಹಿಸಿದರು.

ಕಾರ್ಯಕ್ರಮ ದುಅ: ಆಶಿರ್ವಚನ ಮತ್ತು ಉದ್ಘಾಟನೆ ಯನ್ನು ಅಸ್ಸಯ್ಯದ್ ತ್ವಾಹಿರ್ ಸಹದಿ ತಂಗಳ್ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಯವರು ಸ್ವಾಗತಿಸಿದರು ನಗರ ಪಂಚಾಯತ್ ಸದಸ್ಯ , ಉಮ್ಮರ್ ಕೆ ಎಸ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಶಾಯಿದ್ ಟಿ ಎಂ ತೆಕ್ಕಿಲ್, ಮೀಫ್ ಉಪಾಧ್ಯಕ್ಷ ಮುಸ್ತಾಫ ಕೆ ಎಂ, ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲ್, ಆದಂ ಹಾಜಿ ಕಮ್ಮಾಡಿ ಇವರುಗಳನ್ನು ಸನ್ಮಾನಿಸಲಾಯಿತು. ಸಂಚಾಲಕರದ ಸಿದ್ದೀಕ್ ಫ್ರೂಟ್ ಕಾರ್ಯಕ್ರಮ ನಿರೂಪಿಸಿದರು.

ನಿರ್ದೇಶಕರುಗಳಾದ ಅಬ್ದುಲ್ಲ ಅರಂಬೂರ್, ನವಾಜ್ ಜಯನಗರ, ಇಕ್ಬಾಲ್ ಸುಣ್ಣಮೂಲೆ, ರಝಕ್ ಪುತ್ತು ಕರಾವಳಿ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್, ಹಮೀದ್ ಚಾಯ್ಸ್, ಅಂಚು ನಾವೂರು, ಜುನೈದ್ ಗುರಂಪು, ಶಾಜಿದ್ ನಾವೂರು, ಲತೀಫ್ ಕುಂಬ್ಳೆ, ಹನಸ್ ಮೆಟ್ರೊ, ಸಿನಾನ್ ಬೀಜಕೊಚ್ಚಿ, ಅಭಿ ಬೀಜಕೊಚ್ಚಿ, ಅಪ್ಪು ಮಾಸ್ಟರ್ ಹಾಗು ಇತರರು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

ಬೃಹತ್ ಸಂಖ್ಯೆಯಲ್ಲಿ ಸೇರಿದ ಕೇಳುಗರು

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ