ಕರೆಂಟ್​ ಕಳ್ಳತನ ಆರೋಪದಲ್ಲಿ HDKಗೆ ದಂಡ ಹಾಕಿದ್ದ ಇಬ್ಬರು ಬೆಸ್ಕಾಂ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಇಂದು ಬೆಳ್ಳಂಬೆಳಗ್ಗೆ ರಾಜ್ಯದ 63 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 13 ಅಧಿಕಾರಿಗಳ ಮನೆಗೆ ರೇಡ್ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಅದರಲ್ಲಿ ಇತ್ತೀಚೆಗೆ ಕರೆಂಟ್ ಕಳ್ಳತನ ಆರೋಪದ ಮೇರೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ದಂಡ ವಿಧಿಸಿದ್ದ ಇಬ್ಬರು ಬೆಸ್ಕಾಂ ಅಧಿಕಾರಿಗಳ ಮನೆ ಮೇಲೂ ಲೋಕಾಯುಕ್ತರು ರೇಡ್ ಮಾಡಿದ್ದಾರೆ. ಇತ್ತೀಚೆಗೆ ಕುಮಾರಸ್ವಾಮಿ ಅವರ ಮೇಲೆ ಕಾಂಗ್ರೆಸ್ ಕರೆಂಟ್ ಕಳ್ಳತನ ಆರೋಪ ಹೊರಿಸಿತ್ತು. ದೀಪಾವಳಿ ಸಮಯದಲ್ಲಿ ಲೈಂಟಿಂಗ್ಗಾಗಿ ಮನೆಯ ಹೊರಭಾಗದ ಕರೆಂಟ್ ಕಂಬದಿಂದ ನೇರವಾಗಿ ಕನೆಕ್ಷನ್ ನೀಡಲಾಗಿತ್ತು. ಈ ಪ್ರಕರಣವನ್ನು ಪರಿಶೀಲಿಸಿದ ಬೆಸ್ಕಾಂ ಅಧಿಕಾರಿಗಳು ಕುಮಾರಸ್ವಾಮಿ ಅವರಿಗೆ ದಂಡ ವಿಧಿಸಿದ್ದರು.

ಆದರೆ ಇಂದು ಲೋಕಾಯುಕ್ತ ದಾಳಿಗೊಳಗಾದ ಇಬ್ಬರು ಅಧಿಕಾರಿಗಳು ಕುಮಾರಸ್ವಾಮಿಗೆ ನೋಟಿಸ್ ಕೊಟ್ಟು ದಂಡ ವಸೂಲಿ ಮಾಡಿದವರು ಎಂದು ತಿಳಿದುಬಂದಿದೆ. ಮಾಜಿ ಮುಖ್ಯಮಂತ್ರಿ ವಿರುದ್ಧ ಕರೆಂಟ್ ಕಳ್ಳತನ ಆರೋಪ ಕೇಳಿಬಂದ ಹಿನ್ನೆಲೆ ಬೆಸ್ಕಾಂ ಜಾಗೃತದ ದಳದ ಟಿ.ಎನ್ ಸುಧಾಕರ್ ಅವರು ಹೆಚ್ ಡಿಕೆಗೆ ನೊಟೀಸ್ ಕೊಟ್ಟು ಮನೆಗೆ ಹೋಗಿ ಪರಿಶೀಲನೆ‌ ಮಾಡಿದ್ದರು.

ನಂತರ ಚೆನ್ನಕೇಶವ ಎಂಬ ಅಧಿಕಾರಿ ವಿದ್ಯುತ್ ಕಳ್ಳತನದ ಆರೋಪದ ಕೇಸ್ ಮೇಲೆ ಕುಮಾರಸ್ವಾಮಿ ಅವರಿಂದ ದಂಡ ವಸೂಲಿ ಮಾಡಿದ್ದರು. ಇದೀಗ ಇಬ್ಬರೂ ಅಧಿಕಾರಿಗಳ ಮನೆ ಮೇಲೂ ಕೂಡ ಇಂದು ಲೋಕಾಯುಕ್ತ ರೇಡ್ ನಡೆದಿದೆ. ಬೆಸ್ಕಾಂ ಎಕ್ಸಿಕ್ಯುಟಿವ್ ಎಂಜಿನಿಯರ್ ಚೆನ್ನಕೇಶವ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ 6 ಲಕ್ಷ ನಗದು, ಸುಮಾರು 3 ಕೆಜಿ ಚಿನ್ನಾಭರಣ ಸೇರಿ 28 ಕೆಜಿ ಬೆಳ್ಳಿ ಪತ್ತೆಯಾಗಿದೆ. 25 ಲಕ್ಷ ಮೌಲ್ಯದ ಡೈಮಂಡ್ಸ್ ಸೇರಿ ಒಂದೂವರೆ ಕೋಟಿ ಮೌಲ್ಯದ ಚಿನ್ನಾಭರಣ ಲೋಕಾಯುಕ್ತರಿಗೆ ಸಿಕ್ಕಿದೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ