ಸುಳ್ಯದ‌ ಹೃದಯ‌ ಭಾಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ವೃತ್ತ ಸ್ಥಾಪನೆ; ಇದು‌ ನಮ್ಮೆಲ್ಲರ ಕನಸಿನ‌ ಯೋಜನೆ ಎಂದ ಶರೀಫ್ ಕಂಠಿ

ಸುಳ್ಯದ‌ ಗಾಂಧಿನಗರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ವೃತ್ತ ಶೀಘ್ರದಲ್ಲಿ ನಿರ್ಮಾಣವಾಗಲಿದ್ದು, ಇದರ ಪ್ರಾಥಮಿಕ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಈ ರಸ್ತೆಯು ಜಟ್ಟಿಪಳ್ಳ, ನಾವೂರು ಹೀಗೆ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕೂಡಾ ಹೌದು, ಇಲ್ಲಿ ವೃತ್ತದ ಅವಶ್ಯಕತೆಯು ಬಹಳ ಇದೆ. “ಮಹಾತ್ಮ ಗಾಂಧಿ ವೃತ್ತ” ಇದು‌ ನನ್ನ ಕನಸಿನ‌ ಕೂಸು ಎಂದು, ನಗರ ಪಂಚಾಯತ್ ಸದಸ್ಯರು ಹಾಗೂ ಈ ಕಾಮಗಾರಿಯ ರೂವಾರಿಯಾದ ಶರೀಫ್ ಕಂಠಿ ಅಭಿಪ್ರಾಯ ಪಟ್ಟಿದ್ದಾರೆ.

ತನ್ನ ಖೋಟದ ಅಡಿಯಲ್ಲಿ ಬರುವ ಸರಕಾರದ ಅನುದಾನ ದಿಂದ ಸ್ವಲ್ಪ ಇದಕ್ಕೆಂದೆ ಮೀಸಲಿಟ್ಟಿದ್ದೇನೆ ಸಾರ್ವಜನಿಕರು ನನಗೆ ಸಹಕಾರ ನೀಡಬೇಕೆಂದು ಈ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ