ಮಿಚಾಂಗ್ ಚಂಡಮಾರುತ: ಸಹಾಯಕ್ಕೆ ಬಂದ ನಟ ಸೂರ್ಯ

ಮಿಚಾಂಗ್ ಚಂಡಮಾರುತಕ್ಕೆ ಚೆನ್ನೈ ತತ್ತರಿಸಿ ಹೋಗಿದೆ. ತಮಿಳು ನಾಡಿನ ಸಾಕಷ್ಟು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲಿನವರ ಬದುಕು ನೀರಿನಲ್ಲಿ ಮುಳುಗಿದೆ. ಇಂತಹ ಸಂದರ್ಭದಲ್ಲಿ ತಮಿಳಿನ ಹೆಸರಾಂತ ನಟರಾದ ಸೂರ್ಯ (Surya), ಕಾರ್ತಿ ಸಹಾಯ ಹಸ್ತ ಚಾಚಿದ್ದಾರೆ. ತಿರುವಳ್ಳೂರು ಜಿಲ್ಲೆ, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಸೇರಿದಂತೆ ಹಲವು ಪ್ರವಾಹ ಪೀಡಿತ ಊರಿಗಳಿಗೆ ನೆರವು ನೀಡಿದ್ದಾರೆ.

ಆರಂಭಿಕ ಮೊತ್ತವಾಗಿ ಹತ್ತು ಲಕ್ಷ ರೂಪಾಯಿ ನೀಡಿದ್ದು, ಇನ್ನೂ ಹೆಚ್ಚಿನ ನೆರವು ನೀಡಲಿದ್ದಾರೆ. ಮಿಚಾಂಗ್ ಚಂಡಮಾರುತ (Cyclone Michaung) ರೌದ್ರರೂಪಕ್ಕೆ ತಮಿಳುನಾಡು (Tamilnadu), ಆಂಧ್ರದಲ್ಲಿ (Andhra Pradesh) ಭಾರೀ ಮಳೆಯಾಗಿದೆ. ಕಳೆದ 80 ವರ್ಷಗಳಲ್ಲಿ ಕಂಡು ಕೇಳರಿಯದ ಭಾರೀ ಬಿರುಗಾಳಿ ಸಹಿತ ಮಳೆಗೆ ಚೆನ್ನೈ ನಗರವಂತೂ ಪ್ರವಾಹ ಕಾರಣ ಹೆಚ್ಚು ಕಡಿಮೆ ಸ್ತಂಭಿಸಿದೆ. ಬಿಟ್ಟುಬಿಡದೇ ಸುರಿತಿರೋ ಮಳೆಯ (Rain) ಪರಿಣಾಮ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಚೆನ್ನೈನಲ್ಲಿ 5 ಮಂದಿ ಬಲಿಯಾಗಿದ್ದು, ನೀರುಪಾಲಾಗುತ್ತಿದ್ದ 20ಕ್ಕೂ ಹೆಚ್ಚು ಜನರನ್ನು ರಕ್ಷಣಾ ಪಡೆಗಳು ಕಾಪಾಡಿವೆ. ನಗರದ 14 ರೈಲ್ವೇ ಸಬ್‍ವೇಗಳು ಬಂದ್ ಆಗಿವೆ. ರೈಲು-ವಿಮಾನ-ರಸ್ತೆ ಸಂಚಾರದಲ್ಲಿ ತೀವ್ರ ವ್ಯತ್ಯಯವಾಗಿವೆ. ಚೆನ್ನೈ ಏರ್ ಪೋರ್ಟ್‍ನಲ್ಲಿ ನೀರು ಆವರಿಸಿದೆ. ಪ್ರಮುಖ ರಸ್ತೆಗಳು ಜಲಮಯವಾಗಿವೆ. ಚೆನ್ನೈ ಸಾರಿಗೆ ಬಸ್‍ಗಳು ಸಹ ರಸ್ತೆಗೆ ಇಳಿದಿಲ್ಲ. ಮನೆಗಳಿಗೂ ನೀರು ನುಗ್ಗಿದೆ. ವಾಹನಗಳು ನೀರಲ್ಲಿ ಮುಳುಗಿವೆ. ಕೋರ್ಟ್-ಕಚೇರಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯುತ್, ನೀರು ಸರಬರಾಜು ವ್ಯವಸ್ಥೆ ಅಸ್ಥವ್ಯಸ್ತವಾಗಿದೆ. ಸಾಧ್ಯವಾದಷ್ಟು ಜನ ಮನೆಗೆ ಸೀಮಿತ ಆಗಬೇಕು ಎಂದು ಸರ್ಕಾರ ಕೋರಿದೆ. ಕಾಂಚಿಪುರಂ, ಚೆಂಗಲ್‍ಪಟ್ಟು, ತಿರುವಳ್ಳುವರ್ ಜಿಲ್ಲೆಗಳಲ್ಲೂ ವ್ಯಾಪಕ ಮಳೆ ಆಗುತ್ತಿದೆ. ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆಗುತ್ತಿದೆ. ತಿರುಮಲದಲ್ಲಿ ಮಳೆ ಕಾರಣ ಭಕ್ತರು ಪರದಾಡಿದರು. ಇಂದು ಮಧ್ಯಾಹ್ನ 12 ಗಂಟೆಗೆ ಮಿಚೌಂಗ್ ಚಂಡಮಾರುತ ನಿಜಾಂಪಟ್ಟಣಂ ಬಳಿ ತೀರ ದಾಟಲಿದೆ. ನಂತರ ಕೋಸ್ತಾ ಆಂಧ್ರ ತೀರಕ್ಕೆ ಸಮನಾಂತವಾರವಾಗಿ ಚಲಿಸಲಿದೆ.ಸದ್ಯ ಚೆನ್ನೈನಿಂದ 90 ಕಿಲೋಮೀಟರ್ ದೂರದಲ್ಲಿ ಚಲಿಸುತ್ತಿದೆ. 90ರಿಂದ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಮುದ್ರ ಪ್ರಕುಬ್ಧಗೊಂಡಿದೆ. ಚೆನ್ನೈ ತಲುಪಬೇಕಿದ್ದ 27ಕ್ಕೂ ಹೆಚ್ಚು ವಿಮಾನಗಳು ಬೆಂಗಳೂರು ಸೇರಿವೆ. ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ರೈಲು ಸೇವೆ ಕೂಡ ಬಂದ್ ಆಗಿದೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ