ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಪದಾಧಿಕಾರಿಗಳಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ ಮುಸ್ಲಿಂ ಸಮುದಾಯ ನೀಡುವ ಗೌರವ ಮತ್ತು ಆತಿಥ್ಯ ಎಂದೂ ಮರೆಯಲಾಗದು: ಅಶೋಕ್ ರೈ

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಮಾವೇಶದಲ್ಲಿ, ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಮತ್ತು ಸಂಘಟನಾ ಕಾರ್ಯದರ್ಶಿ ನಝಿರ್ ಮಠ ರಾಜ್ಯ ಅಲ್ಪ ಸಂಖ್ಯಾತ ಘಟಕ ದ ವತಿಯಿಂದ ಸನ್ಮಾನಿಸಲಾಯಿತುಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ್ ಕುಮಾರ್ ರೈ ಯವರುಮುಸ್ಲಿಂ ಸಮುದಾಯ ನೀಡುವ ಗೌರವ ಮತ್ತು ಆತಿಥ್ಯ ಯಾವತ್ತೂ ಮರೆಯುವುದು ಸಾಧ್ಯವಿಲ್ಲಾ, ಶಾಸಕರ ಬಳಿ ನಿಮ್ಮ ಕೆಲಸಕ್ಕೆ ಬರುವಾಗ ಸರಿಯಾದ ದಾಖಲೆ ಮತ್ತು ಪೇಪರ್ ವರ್ಕ್ ಮಾಡಿ ಬಂದರೆ ಸುಲಭದಲ್ಲಿ ಕೆಲಸ ಸಾಧ್ಯ ಎಂದರುಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ. ಬಿ. ವಿಶ್ವನಾಥ್ ರೈ, ಕೆಪಿಸಿಸಿ ಸಂಯೋಜಕ ನೂರುದ್ದೀನ್ ಸಾಲ್ಮರ, ಡಿಸಿಸಿ ವಕ್ತಾರ ಮಹಮ್ಮದ್ ಬಡಗನ್ನೂರ್, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ,ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗ ಅಧ್ಯಕ್ಷ ಶುಕೂರ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ