ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯತಿನಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಬಳಿಕ ಇದುವರೆಗೆ ಯಾವುದೇ ಸಾಮಾನ್ಯ ಸಭೆ ನಡೆಯದೆ ಇದ್ದು ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರು ಅಧ್ಯಕ್ಷರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಘಟನೆ ವರದಿಯಾಗಿದೆ.
ಪಂಚಾಯತ್ ನಲ್ಲಿ ಸಾಮಾನ್ಯ ಸಭೆ ಮಾಡದೆ ಇರುವ ಕಾರಣ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿದೆ. ಅಧ್ಯಕ್ಷರ ಈ ನಡವಳಿಕೆಯಿಂದ ಗ್ರಾಮದಲ್ಲಿ ಜನರ ಮತ ಪಡೆದು ಗೆದ್ದು ಬಂದಿರುವ ಇತರ ಸದಸ್ಯರುಗಳಿಗೆ ಜನರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ಸಂಧಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿರೋಧ ಪಕ್ಷದ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಅಧ್ಯಕ್ಷರು ಇತರ ಸದಸ್ಯರುಗಳನ್ನು ಕಡಗಣನೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೂಡ ಕೇಳಿಬಂದಿದೆ. ಪಂಚಾಯತ್ ನಲ್ಲಿ ಸದಸ್ಯರುಗಳ ನಡುವೆ ಉಂಟಾಗಿರುವ ಈ ಸಮಸ್ಯೆಗಳಿಂದ ನಮ್ಮ ಸಮಸ್ಯೆಗಳನ್ನು ಆಲಿಸುವವರು ಯಾರು ಇಲ್ಲ ಎಂದು ಸಾರ್ವಜನಿಕರ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ. ಈ ಎಲ್ಲಾ ಘಟನೆಗೆ ಕಾರಣ ಸಭೆಯಲ್ಲಿ ಕೋರಮ್ ಕೊರತೆಯಿಂದ ಸಾಮಾನ್ಯ ಸಭೆಯನ್ನು ಮುಂದೂಡುತಾ ಬರುತ್ತಿದ್ದಾರೆ ಎಂದೂ ಕೂಡ ತಿಳಿದುಬಂದಿದೆ.