20 ಓವರ್‌ಗಳಲ್ಲಿ 314 ರನ್‌, 9 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ; T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ನೇಪಾಳ


16 ವರ್ಷಗಳಿಂದ ಯುವರಾಜ್‌ ಸಿಂಗ್‌ ಹೆಸರಲ್ಲಿದ್ದ ದಾಖಲೆ ನುಚ್ಚು ನೂರು
-ರೋಹಿತ್‌ ಶರ್ಮಾ ದಾಖಲೆಯೂ ಪುಡಿ-ಪುಡಿ

ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ಪುರುಷರ ಟಿ20 ಕ್ರಿಕೆಟ್‌ನಲ್ಲಿ (Asian Games T20 Cricket) ನೇಪಾಳ ತಂಡ ಹಲವು ವಿಶ್ವದಾಖಲೆಗಳನ್ನ ಉಡೀಸ್‌ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ.ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ನೇಪಾಳ ತಂಡದ ಬ್ಯಾಟರ್‌ಗಳು ಅಬ್ಬರಿಸಿದ್ದು 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ ಬರೊಬ್ಬರಿ 314 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ. 315 ರನ್‌ಗಳ ಗುರಿ ಬೆನ್ನತ್ತಿದ್ದ ಮಂಗೋಲಿಯಾ (Mongolia) ತಂಡ 13.1 ಓವರ್‌ಗಳಲ್ಲೇ ಕೇವಲ 41 ರನ್‌ ಗಳಿಗೆ ಆಲೌಟ್‌ ಆಗಿದೆ. ಪರಿಣಾಮ ನೇಪಾಳ 273 ರನ್‌ಗಳ ಭರ್ಜರಿ ಜಯ ಸಾಧಿಸಿದೆ.ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ (T20I) ಇತಿಹಾಸದಲ್ಲಿ ಇದೇ ಮೊದಲಬಾರಿಗೆ 300 ರನ್‌ ಚಚ್ಚಿದ್ದು ಇದೇ ಮೊದಲು. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಮಾತ್ರವಲ್ಲದೇ ಇನ್ನೂ ಕೆಲ ಪ್ರಮುಖ ವಿಶ್ವದಾಖಲೆಗಳು ಈ ಪಂದ್ಯದಲ್ಲಿ ನಿರ್ಮಾಣವಾಗಿದೆ. ಇದೊಂದೇ ಪಂದ್ಯದಲ್ಲಿ ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ, ಸ್ಫೋಟಕ ಅರ್ಧಶತಕಗಳೂ ದಾಖಲಾಗಿದೆ. ಏಷ್ಯನ್ ಗೇಮ್ಸ್ ಟೂರ್ನಿಯ ಪುರುಷರ ಕ್ರಿಕೆಟ್‌ನ ಮೊದಲ ಪಂದ್ಯದಲ್ಲೇ ನೇಪಾಳ ಬ್ಯಾಟ್ಸ್‌ಮ್ಯಾನ್‌ಗಳಿಂದ ಈ ಪ್ರದರ್ಶನ ಕಂಡುಬಂದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗೋಲಿಯಾ ತಂಡ ಬೌಲಿಂಗ್‌ ಆಯ್ದುಕೊಂಡು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ನೇಪಾಳ ತಂಡಕ್ಕೆ ನೀಡಿತು. ಮೊದಲ ಎರಡು ವಿಕೆಟ್‌ ಪಡೆಯುವವರೆಗೆ ಉತ್ತಮ ಹಿಡಿತ ಸಾಧಿಸಿದ್ದ ಮಂಗೋಲಿಯಾ ನಂತರ ಎದುರಾಳಿ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ವಿಫಲವಾಯಿತು. ಹಿಟ್‌ಮ್ಯಾನ್‌ ದಾಖಲೆ ನುಚ್ಚು ನೂರು:
ಕ್ರೀಸ್‌ಗಿಳಿಯುತ್ತಿದ್ದಂತೆ ಮಂಗೋಲಿಯಾ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ ಕುಶಾಲ್ ಮಲ್ಲ (Kushal Malla) ಹಾಗೂ ನಾಯಕ ರೋಹಿತ್ ಪೌಡೆಲ್ ಸ್ಫೋಟಕ ಬ್ಯಾಟಿಂಗ್‌ನಿಂದ ವಿಶ್ವ ದಾಖಲೆ ನಿರ್ಮಿಸಿದರು. ನಾಯಕ ರೋಹಿತ್‌ ಪೌಡೆಲಾ 27 ಎಸೆತಗಳಲ್ಲಿ 6 ಸಿಕ್ಸರ್‌, 2 ಬೌಂಡರಿಗಳೊಂದಿಗೆ 61 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ ಕೊನೆಯವರೆಗೂ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದ ಕಲುಶಾಲ್‌ ಮಲ್ಲ ಕೇವಲ 34 ಎಸೆತಗಳಲ್ಲಿ 9 ಸಿಕ್ಸರ್‌, 6 ಬೌಂಡರಿಗಳೊಂದಿಗೆ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ 35 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ದಾಖಲೆಯನ್ನೂ ಉಡೀಸ್‌ ಮಾಡಿದರು. ಒಟ್ಟಾರೆ 50 ಎಸೆತಗಳನ್ನ ಎದುರಿಸಿದ ಕುಶಾಲ್‌ ಮಲ್ಲ 12 ಸಿಕ್ಸರ್‌, 8 ಬೌಂಡರಿಗಳೊಂದಿಗೆ 137 ಬಾರಿಸಿ ಅಜೇರಾಗುಳಿದರು.

ಯುವಿ ದಾಖಲೆ ಪುಡಿ ಪುಡಿ:
ಇನ್ನೂ ನೇಪಾಳ ತಂಡದ ಮತ್ತೋರ್ವ ಆಟಗಾರ ದೀಪೇಂದ್ರ ಸಿಂಗ್ ಐರಿ (Dipendra Singh Airee) ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಹೆಸರಿನಲ್ಲಿದ್ದ 16 ವರ್ಷಗಳ ಹಿಂದಿನ ದಾಖಲೆಯನ್ನ ಪುಡಿ ಪುಡಿ ಮಾಡಿದರು. ಯುವರಾಜ್ ಸಿಂಗ್ 2007ರ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಆದ್ರೆ ನೇಪಾಳ ಕ್ರಿಕೆಟಿಗ ದೀಪೇಂದ್ರ ಸಿಂಗ್‌ ಸತತವಾಗಿ 8 ಸಿಕ್ಸ್‌ಗಳನ್ನ ಬಾರಿಸುವ ಮೂಲಕ ಕೇವಲ 9 ಎಸೆತಗಳಲ್ಲೇ 50 ರನ್‌ ಚಚ್ಚಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಒಟ್ಟು 10 ಎಸೆತಗಳಲ್ಲಿ 52 ರನ್‌ ಬಾರಿಸಿ ಅಜೇಯರಾಗುಳಿದಿದ್ದಾರೆ. ಇಷ್ಟು ಸಾಲದು ಅಂತ ನೇಪಾಳ ತಂಡ ಟಿ20 ಕ್ರಿಕೆಟ್‌ನಲ್ಲಿ ಹಿಂದೆಂದೂ ಕಾಣದಷ್ಟು ರನ್ ಕಲೆಹಾಕಿದೆ. 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 314 ರನ್‌ಗಳನ್ನು ಗಳಿಸಿದೆ. ಇದು ಟಿ20 ಇತಿಹಾಸದಲ್ಲೇ 300ಕ್ಕೂ ಹೆಚ್ಚು ರನ್‌ ದಾಖಲಾದ ಪಂದ್ಯವಾಗಿದೆ. ಅಫ್ಘಾನಿಸ್ತಾನ ತಂಡ 2019ರಲ್ಲಿ ಐರ್ಲೆಂಡ್ ವಿರುದ್ಧ 3 ವಿಕೆಟ್‌ ನಷ್ಟಕ್ಕೆ 278 ರನ್‌ ಗಳಿಸಿದ್ದು ಈವರೆಗಿನ ಅತಿಹೆಚ್ಚಿನ ರನ್‌ ಆಗಿತ್ತು.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ