ಕೋಲಾರ: ಸಂತೆ ಮೈದಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ ವಿಚಾರವಾಗಿ ಇಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ (Murder) ಅಂತ್ಯಗೊಂಡಿದೆ. ಮೃತಪಟ್ಟ ವ್ಯಕ್ತಿಯನ್ನು ವೆಂಕಟರಾಯಪ್ಪ (55) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿ ಶಂಕರಪ್ಪ ಎಂದು ತಿಳಿದು ಬಂದಿದೆ. ಇವರಿಬ್ಬರ ನಡುವೆ ಶ್ರೀನಿವಾಸಪುರದ ಗೌನಿಪಲ್ಲಿ ಗ್ರಾಮದ ಸಂತೆ ಮೈದಾನದಲ್ಲಿ ಗಲಾಟೆ ನಡೆದಿತ್ತು. ಇವರಿಬ್ಬರನ್ನು ಸ್ಥಳೀಯರು ಸಮಾಧಾನ ಮಾಡಿ ಕಳಿಸಿದ್ದರು. ನಂತರ ಪುನಃ ಆರೋಪಿ ಶಂಕರಪ್ಪ, ವೆಂಕಟರಾಯಪ್ಪನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾನೆ. ಈ ವೇಳೆ ತೀವ್ರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಮೃತನ ಮಗ ಮನೋಹರ್ ಆರೋಪಿಸಿದ್ದಾನೆ. ಗೌನಿಪಲ್ಲಿ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.