ಪಾಕಿಸ್ತಾನಕ್ಕೆ ಸೇನಾ ವಾಹನಗಳ ಮಾಹಿತಿ ರವಾನೆ – ಸೇನೆಯ ಮಾಜಿ ಸಿಬ್ಬಂದಿ ಅರೆಸ್ಟ್ – ಕರುನಾಡ ನ್ಯೂಸ್


ಲಕ್ನೋ: ಪಾಕಿಸ್ತಾನಿ (Pakistan) ಗುಪ್ತಚರ ಸಂಸ್ಥೆ ಐಎಸ್‍ಐಗೆ ಸೇನೆಯ ಚಲನವಲನದ ಮಾಹಿತಿ ರವಾನಿಸಿದ ಆರೋಪದ ಮೇಲೆ ಸೇನೆಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸಿದ್ದ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ (Uttar Pradesh) ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) (Anti-Terrorist Squad) ಬಂಧಿಸಿದೆ. ಬಂಧಿತ ಆರೋಪಿಯನ್ನು ಶೈಲೇಂದ್ರ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ. ಆತ ಅರುಣಾಚಲ ಪ್ರದೇಶದಲ್ಲಿ ಸೇನೆಯಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡಿದ್ದಾನೆ. ಈ ಬಗ್ಗೆ ಲಕ್ನೋದಲ್ಲಿ ಅಧಿಕಾರಿಗಳು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬಂಧಿತ ಆರೋಪಿ ಸೇನಾ ವಾಹನಗಳು ಇರುವ ಸ್ಥಳ ಮತ್ತು ಚಲನವಲನಕ್ಕೆ ಸಂಬಂಧಿಸಿದ ಸೇನೆಯ ಮಾಹಿತಿಯನ್ನು, ಛಾಯಾಚಿತ್ರಗಳನ್ನು ಐಎಸ್‍ಐಗೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ವಿಚಾರಣೆಗಾಗಿ ಲಕ್ನೋದ ಎಟಿಎಸ್ ಪ್ರಧಾನ ಕಚೇರಿಗೆ ಕರೆಸಲಾಗಿದೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಟಿಎಸ್ ತಂಡವು ಆರೋಪಿಯ ವಾಟ್ಸಾಪ್ ಮತ್ತು ಫೇಸ್‍ಬುಕ್ ಮೂಲಕ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂಬುದು ದೃಢಪಟ್ಟಿದೆ. ನಕಲಿ ಗುರುತಿನೊಂದಿಗೆ ಐಎಸ್‍ಐಗಾಗಿ ಕೆಲಸ ಮಾಡುತ್ತಿದ್ದ ಹರ್ಲೀನ್ ಕೌರ್ ಎಂಬ ಮಹಿಳೆಯೊಂದಿಗೆ ಸಿಂಗ್ ಫೇಸ್‍ಬುಕ್ ಮೂಲಕ ಸಂಪರ್ಕದಲ್ಲಿದ್ದಾನೆ. ಅಲ್ಲದೇ ಮತ್ತೋರ್ವ ಐಎಸ್‍ಐ ಏಜೆಂಟ್ ಜೊತೆ ಕೂಡ ಸಂಪರ್ಕದಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ