ದಿನಾಂಕ: ೨೫.೦೯.೨೦೨೩ರಂದು ನೆಹರು ಮೆಮೋರಿಯಲ್ ಕಾಲೇಜಿನ ದೃಶ್ಯ-ಶ್ರವಣ ಕೊಠಡಿಯಲ್ಲಿ ಯು.ಜಿ.ಸಿ ಸೆಲ್ ಮತ್ತು ಅರ್ಥಶಾಸ್ತç ವಿಭಾಗದ ಸಹಭಾಗಿತ್ವದಲ್ಲಿ, ಕಾಲೇಜಿನ ಅರ್ಥಶಾಸ್ತç ವಿಭಾಗದ ವಿದ್ಯಾರ್ಥಿಗಳಿಗೆ “ಮೇರಿ ಮಾಟಿ ಮೇರಾ ದೇಶ್” ತೇಪೆ ಚಿತ್ರಗಾರಿಕೆ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ ಬಾಲಚಂದ್ರ ಗೌಡ ಇವರು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎA ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಶ್ರೀಮತಿ ರತ್ನಾವತಿ ಡಿ. ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಅಧಿಕಾರಿ ಡಾ. ಮಮತಾ ಕೆ ಉಪಸ್ಥಿತರಿದ್ದರು. ಕಾಲೇಜಿನ ಅರ್ಥಶಾಸ್ತç ವಿಭಾಗದ ಮುಖ್ಯಸ್ಥರು ಹಾಗೂ ಯುಜಿಸಿ ಸೆಲ್‌ನ ಸಂಯೋಕಜರಾದ ಡಾ. ವಿಜಯಲಕ್ಷಿö್ಮ ಎನ್.ಎಸ್ ಸ್ವಾಗತಿಸಿ, ಅರ್ಥಶಾಸ್ತç ವಿಭಾಗದ ಸಹ ಪ್ರಾಧ್ಯಾಪಕರಾದ ಶ್ರೀ ವಿಷ್ಣು ಪ್ರಶಾಂತ್ ಬಿ. ವಂದಿಸಿದರು. ತೃತೀಯ ಬಿ.ಎ ಪದವಿ ವಿದ್ಯಾರ್ಥಿನಿ ನಿರೀಕ್ಷಾ ಜೆ ಇವರು ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತç ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.
