ಕಾಸರಗೋಡು: ಆಟೋರಿಕ್ಷಾ ಮತ್ತು ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಐವರು ಮೃತಪಟ್ಟ ದಾರುಣ ಘಟನೆ ಕಾಸರಗೋಡಿನಲ್ಲಿ ಸೋಮವಾರ ವರದಿಯಾಗಿದೆ.
ಅಪಘಾತದಲ್ಲಿ ಆಟೋದಲ್ಲಿದ್ದ ನಾಲ್ವರು ಮಹಿಳಾ ಪ್ರಯಾಣಿಕರು ಹಾಗೂ ಚಾಲಕ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳನ್ನು ಇಳಿಸಿ ಶಾಲಾ ಬಸ್ ಹಿಂತಿರುಗುತ್ತಿತ್ತು.
ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ. ಆಟೋ ಚಾಲಕ ಎ.ಎಚ್.ಅಬ್ದುಲ್ ರವೂಫ್(64) ಪ್ರಯಾಣಿಕರಲ್ಲಿ ಮೂವರು ಸಹೋದರಿಯರಾದ ಉಮಾಲಿಮಾ (50), ಬೀಫಾತಿಮಾ ಮೊಗರ್ (50) ಮತ್ತು ನಬೀಸಾ (49) ಇದ್ದರು. ಅವರ ಚಿಕ್ಕಮ್ಮ ಬೀಫಾತಿಮಾ (64) ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಳ್ಳತ್ತಡ್ಕದಲ್ಲಿರುವ ಸಂಬಂಧಿಕರ ಮನೆಗೆ ಹೋಗುತ್ತಿದ್ದರು. ಮೃತದೇಹವನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.