ಈಗಾಗಲೇ ಅಸ್ತಿತ್ವದಲ್ಲಿರುವ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ಪ್ರಮಾಣಪತ್ರ ಪ್ರತೀ ವರ್ಷ ಸಲ್ಲಿಸಬೇಕೆಂಬ ನಿಯಮ ಸಡಿಲಿಕೆ ಮತ್ತು ಈ ಹಿಂದೆಯೇ ವಾಣಿಜ್ಯ, ವಾಸ್ತವೇತರ ಉದ್ದೇಶಕ್ಕೆ ಭೂ ಪರಿವರ್ತನೆ ಗೊಂಡ ಜಮೀನನ್ನು ಮತ್ತೆ ಶೈಕ್ಷಣಿಕ ಉದ್ದೇಶಕ್ಕೆ ಬದಲಾಯಿಸಲು ಕಾನೂನು ತೊಡಕು ಇರುವುದರಿಂದ ಸದ್ರಿ ನಿರ್ಬಂಧ ಕೈ ಬಿಡುವಂತೆ ಆಗ್ರಹಿಸಿ ದ. ಕ. ಮತ್ತು ಉಡುಪಿ ಜಿಲ್ಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ನಿಯೋಗ ದಿನಾಂಕ 9.8.2023 ರಂದು ಒಕ್ಕೂಟದ ಗೌರವಾಧ್ಯಕ್ಷ ಉಮ್ಮರ್ ಟಿ. ಕೆ. ಮತ್ತು ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ಯವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಮಾನ್ಯ ವಿಧಾನ ಸಭಾಧ್ಯಕ್ಷರಾದ ಯು. ಟಿ. ಖಾದರ್ ಫರೀದ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ, ಶಿಕ್ಷಣ ಇಲಾಖೆ ಕಾರ್ಯದರ್ಶಿ ರಿತೇಶ್ ಸಿಂಗ್ ರವರಿಗೆ ಮನವಿ ಸಲ್ಲಿಸಿ ಸಭೆ ನಡೆಸಲಾಗಿತ್ತು,
ಮನವಿಯನ್ನು ಆಲಿಸಿದ ಶಿಕ್ಷಣ ಸಚಿವರು ವಿಧಾನ ಸಭಾಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಮೀಫ್ ಬೇಡಿಕೆಯು ಅರ್ಹ ವಾಗಿದ್ದು
ಈ ಬಗ್ಗೆ ರಾಜ್ಯ ಮಟ್ಟದ ಇತರ ಒಕ್ಕೂಟಗಳ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು, ಇದೀಗ ಬೇಡಿಕೆಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ತಾತ್ಕಾಲಿಕ ಮುಚ್ಚಳಿಕೆ ಪಡೆದು 2023-24 ನೇ ಸಾಲಿಗೆ ಮಾನ್ಯತೆ ನವೀಕರಣಕ್ಕೆ ಅವಕಾಶ ಕಲ್ಪಿಸಿ ತಾತ್ಕಾಲಿಕ ರಿಲೀಫ್ ನೀಡಿರುವುದು ಸ್ವಾಗತಾರ್ಹ ಎಂದು ಮೀಫ್ ಒಕ್ಕೂಟ ಪ್ರತಿಕ್ರಿಯಿಸಿದೆ
ಈ ಸಮಸ್ಯೆಗಳಿಗೆ ಶಾಶ್ವತಪರಿಹಾರ ಒದಗಿಸುವಂತೆ ಕೋರಿ ಇನ್ನೊಮ್ಮೆ ಬೆಂಗಳೂರಿಗೆ ನಿಯೋಗ ಕೊಂಡೊ ಯ್ಯಲಾಗುವುದು ಎಂದು ಮೀಫ್ ಉಪಾಧ್ಯಕ್ಷ ಮುಸ್ತಫ ಸುಳ್ಯ, ಪ್ರದಾನ ಕಾರ್ಯದರ್ಶಿ ರಿಯಾಜ್ ಕಣ್ಣೂರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ
