ಬರಕಾ ವಿದ್ಯಾರ್ಥಿಗಳಿಂದ ಟ್ರಾಫಿಕ್ ಸಿಬ್ಬಂಧಿಗಳಿಗೆ ಫುಡ್ ಕಿಟ್ ವಿತರಣೆ

ಮಂಗಳೂರು ನಗರದ ಟ್ರಾಫಿಕ್ ಪೊಲೀಸರಿಗೆ ಗೌರವ, ಕೃತಜ್ಞತೆ ಸೂಚಿಸುವ ಸಂಕೇತವಾಗಿ, ಬರಾಕಾ ಇಂಟರ್‌ನ್ಯಾಶನಲ್ ಸ್ಕೂಲ್ ಮತ್ತು ಕಾಲೇಜ್, ಅಡ್ಯಾರ್, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಉಪಹಾರದ ಪ್ಯಾಕ್ ಅನ್ನು ನೀಡಿ ಗೌರವಿಸಿದರು.

ಎಲ್ಲಾ ಪರಿಸ್ಥಿತಿಗಳಲ್ಲೂ ದಣಿವರಿಯದೆ ಕೆಲಸ ಮಾಡುವ ನಮ್ಮ ಟ್ರಾಫಿಕ್ ಫೋರ್ಸ್, ನಗರವನ್ನು ಶಾಂತಿಯುತವಾಗಿ, ವ್ಯವಸ್ಥಿತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಅವರ ಅವಿರತ ಸೇವೆಯನ್ನು ಗುರುತಿಸಿ ಗೌರವಿಸುವ ಸಲುವಾಗಿ ಹಾಗೂ ಅವರ ಸೇವೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಲುವಾಗಿ ಈ ಉಪಹಾರ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲಾಡಳಿತ ತಿಳಿಸಿದೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ