ಮೀಫ್ ಪ್ರಯತ್ನದ ಫಲಶ್ರುತಿಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಯಲ್ಲಿ 12 ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಇಂಜಿನಿಯರಿಂಗ್ ಸೀಟ್ ಹಂಚಿಕೆ – ಕರುನಾಡ ನ್ಯೂಸ್ಶಿಕ್ಷಣ ಕ್ಷೇತ್ರದಲ್ಲಿ ಆಹರ್ನಿಶಿ ದುಡಿಯುತ್ತಿರುವ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ನಿಯೋಗ ಇತ್ತೀಚೆಗೆ ಗೌರಾವಾಧ್ಯಕ್ಷ ಉಮ್ಮರ್ ಟೀಕೆ ಯವರ ನೇತೃತ್ವದಲ್ಲಿ ಬೆಂಗಳೂರಿಗೆ ಪ್ರೆಸಿಡೆನ್ಸಿ ಯುನಿವರ್ಸಿಟಿ ಚಾನ್ಸಲರ್ ದ. ಕ. ಮೂಲದ ಡಾ. ನಿಸಾರ್ ರವರನ್ನು ಭೇಟಿಯಾಗಿ ತೆರಳಿ ಅರ್ಹ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಇಂಜಿನಿಯರಿಂಗ್ ಸೀಟು ಮತ್ತು ಹಾಸ್ಟೆಲ್ ವೆಚ್ಚವನ್ನು ಭರಿಸಿ ಸಮಾಜದ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂದು ಕೋರಲಾಗಿತ್ತು,

ಮನವಿಗೆ ಸ್ಪಂದಿಸಿದ ಡಾ ನಿಸಾರ್ ರವರು ಉಚಿತ ಸೀಟ್ ಗಳನ್ನು ಘೋಷಿಸಿದ್ದರು, ದೇಶದ ಪ್ರತಿಷ್ಠಿತ ಯು ನಿವರ್ಸಿಟಿ ಮತ್ತು 100% ಉದ್ಯೋಗದ ಭರವಸೆಯನ್ನು ದೇಶ ವಿದೇಶದ 150 ಕ್ಕೂ ಮಿಕ್ಕಿದ ಕಂಪನಿಗಳೊಂದಿಗೆ ನೇರ ನೇಮಕಾತಿಯ ಅವಕಾಶ ಹೊಂದಿದ ಸಂಸ್ಥೆ ಪ್ರೆಸಿಡೆನ್ಸಿಯಲ್ಲಿ ಪ್ರಸಕ್ತ ಪುತ್ತೂರು, ಬಂಟ್ವಾಳ, ಉಡುಪಿ ವ್ಯಾಪ್ತಿಯ ವರ್ಷದಲ್ಲಿ 12 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಕಾಶ ದೊರೆತಿದ್ದು, ಪ್ರೆಸಿಡೆನ್ಸಿ ಯುನಿವರ್ಸಿಟಿ ಸಂಪೂರ್ಣ ವೆಚ್ಚವನ್ನು ಉಚಿತವಾಗಿ ಭರಿಸಲಿದೆ, ಇದರಿಂದ ದೇಶದ ಪ್ರತಿಷ್ಠಿತ ಪ್ರೆಸಿಡೆನ್ಸಿಯಲ್ಲಿ ವಿದ್ಯಾಭ್ಯಾಸ ಕನಸಾಗಿದ್ದ ಬಡ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿದ ಡಾ. ನಿಸಾರ್ ರವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ,ಪ್ರಧಾನ ಕಾರ್ಯದರ್ಶಿ ರಿಯಾಜ್ ಟ್ಯಾಲೆಂಟ್, ಸಂಯೋಜಕ ಶಾರಿಕ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ