ನಾನು ಬದುಕಿರುವವರೆಗೂ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲು ಬಿಡಲ್ಲ – HD ರೇವಣ್ಣ ಗುಡುಗು

ಹಾಸನ: ನಾನು ಬದುಕಿರುವವರೆಗೂ ಅಲ್ಪ ಸಂಖ್ಯಾತರಿಗೆ (Minorities) ಅನ್ಯಾಯ ಆಗಲು ಬಿಡಲ್ಲ ಎಂದು ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್‌ (BJP-JDS) ಮೈತ್ರಿ ವಿಚಾರವಾಗಿ ಮಾತನಾಡುತ್ತಲೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಜೊತೆ ನಮ್ಮ ಪಕ್ಷವನ್ನ ವಿಲೀನ ಮಾಡಲು ಹೋಗಿಲ್ಲ. ಜೆಡಿಎಸ್ (JDS) ಪಕ್ಷವಾಗಿಯೇ ಉಳಿಯುತ್ತೆ. ನಾನು ಬದುಕಿರುವವರೆಗೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಲು ಬಿಡಲ್ಲ. ನಾವು ಅವರ ಜೊತೆ ಇದ್ದೇ ಇರುತ್ತೇವೆ. ಇದು ನನ್ನ ಧರ್ಮ ಎಂದು ಗುಡುಗಿದ್ದಾರೆ. ಇದೇ ವೇಳೆ ಹಾಸನ (Hassan) ಜಿಲ್ಲೆಯಲ್ಲಿ 1.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ, 75,000. ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಇತರೆ ಬೆಳೆ ಬೆಳೆದಿದ್ದಾರೆ. ಒಟ್ಟು 2.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಂಪೂರ್ಣ ಬೆಳೆ ಉಳಿದಿಲ್ಲ. ಆದರೂ ಸರ್ಕಾರ ಇವತ್ತಿನವರೆಗೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದ್ದಾರೆ. ರೈತರು ಹಾಳು ಬಿದ್ದು ಹೋಗಲಿ ಅನ್ನೋ ಪರಿಸ್ಥಿತಿಗೆ ಬಂದಿರುವ ಸರ್ಕಾರ, ಬರೀ ಗ್ಯಾರಂಟಿ ಕಡೆಗೆ ಗಮನ ಕೊಡುತ್ತಿದೆ. ನಾವೇನಾದ್ರೂ ಮಾತನಾಡಿದ್ರೆ ಜೆಡಿಎಸ್ ಮುಗಿದು ಹೋಗುತ್ತೆ, ಅವರತ್ರ ಹೋಗ್ತಾರೆ, ಇವರತ್ರ ಹೋಗ್ತಾರೆ ಅಂತಾರೆ. ನಾವು ಎಲ್ಲಾದ್ರೂ ಹೋಗ್ತಿವಿ. ನೀವು ಮೊದಲು ರೈತರನ್ನ ಉಳಿಸಿಕೊಳ್ಳಿ. ಇಲ್ಲದಿದ್ದರೆ ರೈತರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಆಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಅಧಿವೇಶನ ಕರೆದು ಚರ್ಚೆ ಮಾಡಬೇಕು ಎಂದು ಎಚ್ಚರಿಸಿದ್ದಾರೆ.ತಮಿಳುನಾಡಿಗೆ 20 ಟಿಎಂಸಿ ನೀರು ಬಿಟ್ಟರು. ಹೇಮಾವತಿ ನದಿಯಿಂದ ತುಮಕೂರಿಗೆ (Tumakur) ಎರಡು ತಿಂಗಳಿನಿಂದ ನೀರು ಬಿಟ್ಟಿದ್ದಾರೆ. ಜೆಡಿಎಸ್‌ಗೆ ವೋಟು ಹಾಕಿದ್ದಾರೆ ಎಂದು ಹಾಸನ ಜಿಲ್ಲೆಗೆ ನೀರು ಹರಿಸಿಲ್ಲ. ನೀರು ಬಿಡುವುದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲೂ ಬರಗಾಲವಿದೆ. 7 ಕ್ಷೇತ್ರಗಳಿಗೂ ಬರ ಘೋಷಣೆ ಮಾಡುವಂತೆ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ 1,18,292 ಹೆಕ್ಟೇರ್‌ನಲ್ಲಿ ತೆಂಗಿನ ಮರಗಳಿದ್ದು, ಮಳೆ ಕೊರತೆಯಿಂದ ಹಾಳಾಗ್ತಿವೆ. ಅರಸೀಕೆರೆ, ಹಾಸನ, ಹೊಳೆನರಸೀಪುರ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಹೆಚ್ಚು ನಷ್ಟವಾಗಿದೆ. ಈ ನಡುವೆ ಶೇ.60 ರಷ್ಟು ತೆಂಗಿನ ಮರಗಳಿಗೆ ರೋಗ ತಗುಲಿದ್ದು, ನಿಯಂತ್ರಣಕ್ಕೆ ಔಷಧಿ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ