ಉತ್ತರ ಪ್ರದೇಶ: ಚಾರಿತ್ರ್ಯದ ಬಗ್ಗೆ ಅನುಮಾನ; ಪತ್ನಿಯ ಖಾಸಗಿ ಅಂಗಕ್ಕೆ ಮೆಣಸಿನ ಪುಡಿ ಹಾಕಿ ‘ಅಗ್ನಿ ಪರೀಕ್ಷೆ’ – ಕರುನಾಡ ನ್ಯೂಸ್


ಬಲ್ಲಿಯಾ: ಪತಿಯೊಬ್ಬ ತನ್ನ ಪತ್ನಿಯ ಚಾರಿತ್ಯದ ಮೇಲೆ ಸಂಶಯದಿಂದ, ಆಕೆಗೆ ತೀವ್ರ ಚಿತ್ರಹಿಂಸೆ ನೀಡಿದ ಭಯಾನಕ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ತನ್ನ ಗಂಡನ ದೌರ್ಜನ್ಯವು ಎಷ್ಟು ತೀವ್ರವಾಗಿತ್ತು ಎಂದರೆ ಅವಳು ತನ್ನ ಮನೆಯನ್ನು ತೊರೆದು ತನ್ನ ಹೆತ್ತವರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಆರೋಪಿ ಪತಿ ತನ್ನ ಪತ್ನಿಯನ್ನು ವಿಲಕ್ಷಣವಾದ ಅಗ್ನಿ ಪರೀಕ್ಷೆಗೆ ಒಳ ಪಡಿಸಿದ್ದು. ಬಿಸಿ ಎಣ್ಣೆಯಲ್ಲಿ ಅವಳ ಕೈಯನ್ನು ಹಾಕಲು ಪ್ರಯತ್ನಿಸಿದ್ದಾನೆ, ಇಲ್ಲಿಗೆ ಕೊನೆಗೊಳಿಸದೆ ಮತ್ತಷ್ಟು ಚಿತ್ರಹಿಂಸೆ ನೀಡಿದ್ದಾನೆ.

ಆರೋಪಿ ಪತಿ ತನ್ನ ಪತ್ನಿಯ ಖಾಸಗಿ‌ ಭಾಗಕ್ಕೆ ಮೆಣಸಿನ ಪುಡಿ ಮತ್ತು ಫೆವಿಕಾಲ್ ಅಂಟು ಸೇರಿಸಿ ಚಿತ್ರಹಿಂಸೆ ನೀಡಿದ್ದಾನೆ.

ಮನನೊಂದ ಯುವತಿ, ಕೊನೆಗೆ ತಾನು ಅನುಭವಿಸಿದ ಭಯಾನಕ ದೌರ್ಜನ್ಯದ ಬಗ್ಗೆ ತನ್ನ ಕುಟುಂಬದಲ್ಲಿ ಹೇಳಿಕೊಂಡಿದ್ದಾಳೆ. ನಂತರ ಆಕೆಯ ಕುಟುಂಬದವರು, ಆರೋಪಿ ಪತಿ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿರ್ಧರಿಸಿ, ಸೆಪ್ಟೆಂಬರ್ 5 ರಂದು ದೌರ್ಜನ್ಯದಲ್ಲಿ ಭಾಗಿಯಾಗಿರುವ ಆಕೆಯ ಪತಿ ಮತ್ತು ಇತರ ಏಳು ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ. ಪೊಲೀಸರು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ