41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್ – ಕರುನಾಡ ನ್ಯೂಸ್


ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಸಾಕಷು ಹಣವನ್ನು ಉಳಿತಾಯ ಮಾಡಲು ಹಾಗೂ ಹೂಡಿಕೆ (Investment) ಮಾಡಲು ಬಯಸುತ್ತಾರೆ. ಈ ಮೂಲಕ ಬೇಗನೆ ನಿವೃತ್ತರಾಗಲು ಬಯಸುತ್ತಾರೆ. ಇಲ್ಲೊಬ್ಬ ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ (Google Software Engineer) ತನ್ನ 22 ವಯಸ್ಸಿನಲ್ಲಿ ವೃತ್ತಿಯನ್ನು ಪ್ರಾರಂಭಿಸುತ್ತಲೇ ತಮ್ಮ 35ನೇ ವಯಸ್ಸಿನೊಳಗೆ 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂ.) ಹೂಡಿಕೆ ಮಾಡಿ, ನಿವೃತ್ತಿ (Retirement) ಹೊಂದುವ ಗುರಿಯನ್ನು ಹೊಂಡಿದ್ದಾರೆ. ಅವರ ಫ್ಯೂಚರ್ ಪ್ಲ್ಯಾನ್ ಯುವಕರಿಗೆ ಸ್ಪೂರ್ತಿದಾಯಕವಾಗಿದೆ. ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 22 ವರ್ಷದ ಎಥಾನ್ ನ್ಗುನ್ಲಿ (Ethan Nguonly) ಇಂತಹ ಒಂದು ಯೋಜನೆಯನ್ನು ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯಲ್ಲಿ ವಾಸವಿರೋ ಟೆಕ್ಕಿ ತನ್ನ ಹಣವನ್ನು ಉಳಿತಾಯ ಮಾಡುವುದಕ್ಕಿಂತ ಹೆಚ್ಚಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದರ ಮಹತ್ವದ ಬಗ್ಗೆ ತನ್ನ ಹೆತ್ತವರು ಹೇಗೆ ಪ್ರೋತ್ಸಾಹ ನೀಡಿದರು ಎಂದು ವಿವರಿಸಿದ್ದಾರೆ.

ನೀವು ನಿಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿ ಇಟ್ಟು ಬಿಟ್ಟರೆ ಅದು ಯಾವುದೇ ಕೆಲಸಕ್ಕೂ ಬರಲ್ಲ. ಕಾಲಾನಂತರ ಅದು ನಿಷ್ಪ್ರಯೋಜಕ ಆಗಿಬಿಡುತ್ತದೆ. ಆದರೆ ನಿಮ್ಮ ಹಣದಿಂದ ಏನಾದರೂ ಪ್ರಯೋಜನ ಆಗಬೇಕೆಂದರೆ ಅದನ್ನು ಹೂಡಿಕೆ ಮಾಡಿ ಎಂದು ಪೋಷಕರು ತನಗೆ ತಿಳಿಸಿದ್ದಾಗಿ ನ್ಗುನ್ಲಿ ಹೇಳಿದ್ದಾರೆ.

ನಾನು ಚಿಕ್ಕವನಿದ್ದಾಗಲೇ ಯೋಚಿಸುತ್ತಿದ್ದ ಮುಖ್ಯ ವಿಷಯವೆಂದರೆ, ಈ ಹಣ ಎಲ್ಲಾ ದೊಡ್ಡದಾಗುತ್ತಾ ಹೋಗುತ್ತದೆ, ಬೆಳೆಯುತ್ತಲೇ ಇರುತ್ತದೆ. ಆದರೆ ಇದಕ್ಕಾಗಿ ನಾವು ಯಾವುದೇ ಕೆಲಸ ಮಾಡುವ ಅಗತ್ಯವೇ ಇಲ್ಲ. ಇದು ನಿಜವಾಗಿಯೂ ನನ್ನ ಹಣವನ್ನು ಹೂಡಿಕೆಗಳಲ್ಲಿ ವಿನಿಯೋಗಿಸಬಹುದು ಎಂಬ ನನ್ನ ಕಲ್ಪನೆಯನ್ನು ಬಹಿರಂಗಪಡಿಸಿತು. ಅದಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡೋ ಬದಲು ಅದನ್ನು ಹೂಡಿಕೆ ಮಾಡುವುದೇ ಉತ್ತಮ ಎಂದು ಹೇಳಿದರು.

ನ್ಗುನ್ಲಿ ಇಂತಹ ಯೋಜನೆಯೊಂದಿಗೆಯೇ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಇದಕ್ಕಾಗಿ ಅವರು ಯಾವುದೇ ಸಾಲ ಮಾಡುವ ಪರಿಸ್ಥಿತಿ ಎದುರಾಗಿಲ್ಲ. ನಂತರ ಅವರು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡೇ ಮಾಹಿತಿ ಹಾಗೂ ಡೇಟಾ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿದರು. 2022ರ ಆಗಸ್ಟ್‌ನಲ್ಲಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಸ್ನಾತಕೋತ್ತರ ಪದವಿ ಪಡೆಯುವುದಕ್ಕೂ ಮೊದಲೇ ನ್ಗುನ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

ನ್ಗುನ್ಲಿ ವಾರ್ಷಿಕ ಆದಾಯ 194,000 ಡಾಲರ್ (ಸುಮಾರು 1.60 ಕೋಟಿ ರೂ.). ಪ್ರಸ್ತುತ ಅವರು ತಮ್ಮ ನಿವೃತ್ತಿ ಹಾಗೂ ಇತರ ಹೂಡಿಕೆ ಖಾತೆಗಳಲ್ಲಿ ಹಾಗೂ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದ ಮನೆಗಳಲ್ಲಿ 135,000 ಡಾಲರ್ (ಸುಮಾರು 1.11 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ. ತಮ್ಮ ವೇತನದಲ್ಲಿ ಅವರು 35% ರಷ್ಟು ಹೂಡಿಕೆಗಳಲ್ಲಿ ವಿನಿಯೋಗಿಸಲು ಮುಂದಾಗಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್‌ನಲ್ಲೂ ವಿನಿಯೋಗಿಸಲು ಯೋಜಿಸಿದ್ದಾರೆ. ನ್ಗುನ್ಲಿ ಊಟಕ್ಕಾಗಿ ಹೆಚ್ಚೇನೂ ಖರ್ಚು ಮಾಡಲ್ಲ. ಏಕೆಂದರೆ ಗೂಗಲ್ ಉಚಿತ ಊಟ, ಉಪಹಾರ ನೀಡುತ್ತದೆ. ಬ್ರ್ಯಾಂಡೆಡ್ ಬಟ್ಟೆಗಳಿಗಾಗಿ ಹೆಚ್ಚಿನ ಖರ್ಚು ಮಾಡಲ್ಲ. ಬದಲಿಗೆ ಸರಳ ಹಾಗೂ ಕೈಗೆಟಕೋ ಬೆಲೆಯಲ್ಲಿ ಸಿಗುವ ಬಟ್ಟೆಗಳಲ್ಲಿ ಧರಿಸಲು ಇಷ್ಟ ಪಡುತ್ತಾರೆ. ಪ್ರಯಾಣವನ್ನು ಹೆಚ್ಚು ಇಷ್ಟಪಡೋ ಅವರು ವರ್ಷಕ್ಕೆ 3-4 ಬಾರಿ ಪ್ರವಾಸ ಹೋಗುತ್ತಾರೆ. ಐಷಾರಾಮಿ ವಸತಿಗೆ ಹಣ ವ್ಯಯಿಸುವ ಬದಲು ಕಡಿಮೆ ವೆಚ್ಚದ ಆಯ್ಕೆಗಳನ್ನು ಮಾಡುತ್ತಾರೆ. 5 ಮಿಲಿಯನ್ ಡಾಲರ್‌ನೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯೋ ಗುರಿಯನ್ನು ತಲುಪಲು ನ್ಗುನ್ಲಿ ತಮ್ಮ ನಿವೃತ್ತಿ ಖಾತೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲು ಯೋಜಿಸಿದ್ದಾರೆ. ಪ್ರತಿ 2 ವರ್ಷಗಳಿಗೊಮ್ಮೆ ಹೊಸ ಆಸ್ತಿಯನ್ನು ಖರೀದಿ ಮಾಡುವ ಮೂಲಕ ತಮ್ಮ ರಿಯಲ್ ಎಸ್ಟೇಟ್ ಪೋರ್ಟ್ಫೋಲಿಯೋಗೆ ಸೇರಿಸುತ್ತಾರೆ. ನಾನು 67ನೇ ವಯಸ್ಸಿನಲ್ಲಿ ಪರ್ವತ ಏರಲು ಬಯಸಲ್ಲ. ಬದಲಿಗೆ ಎಲ್ಲಿಯವರೆಗೆ ಯುವಕನಾಗಿ, ಆರೋಗ್ಯವಾಗಿರುತ್ತೇನೋ ಅಲ್ಲಿಯವರೆಗೆ ಪ್ರಯಾಣವನ್ನು ಮಾಡಿ ಅನುಭವ ಪಡೆಯುತ್ತೇನೆ ಎಂದು ನ್ಗುನ್ಲಿ ಹೇಳುತ್ತಾರೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ