ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ 5 ತಿಂಗಳ ಹಸುಗೂಸನ್ನೇ ಕೊಂದ ಪಾಪಿ ಮಲತಾಯಿ? – ಕರುನಾಡ ನ್ಯೂಸ್


ಯಾದಗಿರಿ: ಮಲತಾಯಿಯೊಬ್ಬಳು ಆಸ್ತಿಗಾಗಿ (Property) ಹಾಲಿಗೆ ವಿಷ ಬೆರೆಸಿ 5 ತಿಂಗಳ ಹಸುಗೂಸನ್ನೇ ಕೊಲೆಗೈದ ಆರೋಪವೊಂದು ಯಾದಗಿರಿ (Yadagiri) ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಕೇಳಿಬಂದಿದೆ ಈ ಘಟನೆ ಆಗಸ್ಟ್ 30ರಂದು ಬಬಲಾದ ಗ್ರಾಮದಲ್ಲಿ ನಡೆದಿದೆ. ದೇವಮ್ಮ ಚೆಟ್ಟಿಗೇರಿ ಆರೋಪಿಯಾಗಿದ್ದು, ಈಕೆ ಹಸುಗೂಸು ಸಂಗೀತಾ ಚೆಟ್ಟಿಗೇರಿಗೆ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿದ್ದಾಳೆ. ಮೃತ ಹಸುಗೂಸು ಸಂಗೀತಾಳಿಗೆ ತಾಯಿ ಶ್ರೀದೇವಿ ಹಾಲು ಕುಡಿಸುತ್ತಿದ್ದಾಗ ಅಲ್ಲಿಗೆ ಬಂದ ದೇವಮ್ಮ, ತಾನು ಹಾಲುಣಿಸುತ್ತೇನೆ ಅಂತಾ ಕರೆದೊಯ್ದಿದ್ದಾಳೆ. ಹೀಗೆ ರೂಮಿಗೆ ಕರೆದೊಯ್ದು ಡೋರ್ ಹಾಕಿ ಹಾಲಿನ ಬಾಟ್ಲಿಯಲ್ಲಿ ವಿಷ ಬೆರೆಸಿ ಕೂಸಿಗೆ ಕೊಟ್ಟಿದ್ದಾಳೆ. ವಿಷಬೆರೆತ ಹಾಲು ಕುಡಿದ ಸಂಗೀತಾ 3 ಗಂಟೆ ನಂತರ ಬಾಯಲ್ಲಿ ನೊರೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಸದ್ಯ ವಡಗೇರಾ ಪೊಲೀಸರು ಆರೋಪಿ ದೇವಮ್ಮಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ (Vadagera Police Station) ಪ್ರಕರಣ ದಾಖಲಾಗಿದೆ ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ ಎರಡು ಮದುವೆಯಾಗಿದ್ದ. 11 ವರ್ಷಗಳ ಹಿಂದೆ ಸಿದ್ದಪ್ಪ ಮೊದಲು ಶ್ರೀದೇವಿಯನ್ನ ಮದುವೆಯಾಗಿದ್ದ. ಆದರೆ ಮಕ್ಕಳಾಗದ ಹಿನ್ನೆಲೆ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದ. ದೇವಮ್ಮಳನ್ನ ಮದುವೆಯಾದ್ಮೇಲೆ ಮೊದಲ ಪತ್ನಿ ಶ್ರೀದೇವಿ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತನ್ನ ತವರು ಮನೆಯಲ್ಲಿದ್ದಳು ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ ಎರಡು ಮದುವೆಯಾಗಿದ್ದ. 11 ವರ್ಷಗಳ ಹಿಂದೆ ಸಿದ್ದಪ್ಪ ಮೊದಲು ಶ್ರೀದೇವಿಯನ್ನ ಮದುವೆಯಾಗಿದ್ದ. ಆದರೆ ಮಕ್ಕಳಾಗದ ಹಿನ್ನೆಲೆ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದ. ದೇವಮ್ಮಳನ್ನ ಮದುವೆಯಾದ್ಮೇಲೆ ಮೊದಲ ಪತ್ನಿ ಶ್ರೀದೇವಿ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತನ್ನ ತವರು ಮನೆಯಲ್ಲಿದ್ದಳು

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ