ಒಂಟಿಯಾಗಿರುವುದು ಉತ್ತಮ ಎಂದ ದರ್ಶನ್- ಕಿಚ್ಚನ ಜೊತೆ ಮತ್ತೆ ಒಂದಾಗಲ್ವಾ ದಚ್ಚು? – ಕರುನಾಡ ನ್ಯೂಸ್


ಸ್ಯಾಂಡಲ್‌ವುಡ್‌ನಲ್ಲಿ(Sandalwood)  ದಿಗ್ಗಜರ ದೋಸ್ತಿ ಜಪ ಜೋರಾಗಿದೆ. ದಚ್ಚು-ಕಿಚ್ಚ ಮತ್ತೆ ಒಂದಾಗಲಿ ಎಂಬ ಕೂಗು ಹೆಚ್ಚಾಗಿದೆ ಕಿಚ್ಚನ ಜೊತೆ ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ದರ್ಶನ್ (Darshan) ಮತ್ತೊಂದು ಹೊಸ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಿನ್ನೆಯಷ್ಟೇ (ಆಗಸ್ಟ್ 28) ದರ್ಶನ್ ಕಾಲಾಯ ತಸ್ಮೈ ನಮಃ ಎಂಬ ಅಡಿಬರಹ ಜೊತೆ ಜೋಡೆತ್ತುಗಳ ಜೊತೆ ನಿಂತಿರುವ ಫೋಟೋ ಶೇರ್ ಮಾಡಿದ್ದರು. ಈ ಮೂಲಕ ಒಂದಾಗುವ ಸುಳಿವು ನೀಡಿದ್ದರು. ಈಗ ನನ್ನ ಸೆಲೆಬ್ರಿಟಿಗಳ ಜೊತೆ ಒಂಟಿಯಾಗಿರುವುದೇ ಉತ್ತಮ ಎಂದು ನಯಾ ಪೋಸ್ಟ್ ಶೇರ್ ಮಾಡಿ, ಶಾಕಿಂಗ್ ಸಂದೇಶ ನೀಡಿದ್ದಾರೆ. 

https://scontent.fixe3-1.fna.fbcdn.net/v/t39.30808-6/370135520_868016574683554_7690154167406337049_n.jpg?_nc_cat=1&ccb=1-7&_nc_sid=730e14&_nc_ohc=jjrJT3qFpKwAX8xdU0k&_nc_ht=scontent.fixe3-1.fna&oh=00_AfAWargLWVLF_PCDpGZcttdBE9JdOMZZ8S-1qC-c61hxAg&oe=64F35934

ಒಂಟಿಯಾಗಿರುವುದರಲ್ಲಿ ಸಂತೋಷ ಇದೆ ಎಂಬ ಪೋಸ್ಟ್ ಸುದೀಪ್ ಜೊತೆ ಒಂದಾಗೋದಿಲ್ಲ ಎಂಬ ಅರ್ಥ ಕೊಡುತ್ತಿದೆಯಾ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ. ದಚ್ಚು- ಕಿಚ್ಚ ಒಂದಾಗುವ ಕನಸು ಕಂಡ ಅಭಿಮಾನಿಗಳಿಗೆ ನಿರಾಸೆಯಾಗಿದೆ.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ