ಹಿರಿಯ ನಟ ದಿ.ಎನ್.ಟಿ.ರಾಮರಾವ್ ಸ್ಮರಣಾರ್ಥ 100 ರೂಪಾಯಿ ನಾಣ್ಯ ರಿಲೀಸ್ – ಕರುನಾಡ ನ್ಯೂಸ್


ತೆಲುಗು ಚಿತ್ರರಂಗದ ದಂತಕಥೆ, ಮಾಜಿ ಸಿಎಂ ದಿವಗಂತ ಎನ್.ಟಿ.ರಾಮರಾವ್  (NT Rama Rao)ಅವರ ಜನ್ಮ ಶತಮಾನೋತ್ಸವ ನೆನಪಿಗಾಗಿ 100 ರೂಪಾಯಿ ಮುಖಬೆಲೆಯ ನಾಣ್ಯವನ್ನು (Coin) ಬಿಡುಗಡೆ ಮಾಡಲಾಗಿದೆ. ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು (Draupathi Murmu) ನಾಣ್ಯವನ್ನು ರಿಲೀಸ್ ಮಾಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಎನ್.ಟಿ.ಆರ್ ಅವರ ಜನ್ಮ ಶತಮಾನೋತ್ಸವದನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳ ಜೊತೆಗೆ ನೂರು ರೂಪಾಯಿ ನಾಣ್ಯ ಕೂಡ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ಎನ್.ಟಿ.ಆರ್ ಪುತ್ರರು ಹಾಗೂ ಪುತ್ರಿಯರು ಹಾಜರಿದ್ದರು. ಕೇಂದ್ರ ಸರಕಾರ ರಿಲೀಸ್ ಮಾಡಿರುವ ನೂರು ರೂಪಾಯಿ ಮುಖಬೆಲೆಯ ನಾಣ್ಯವು, ಶೇಕಡಾ 50ರಷ್ಟು ಬೆಳ್ಳಿ, ಶೇಕಡಾ 40ರಷ್ಟು ತಾಮ್ರ ಮತ್ತು ಶೇಕಡಾ 5ರಷ್ಟು ಸತು ಇದೆ. ಒಂದು ಬದಿಯಲ್ಲಿ ‘ನಂದಮೂರಿ ತಾರಕ ರಾಮರಾವ್ ಶತಜಯಂತಿ’ ಎಂದು ಬರೆದಿದ್ದರೆ ಮತ್ತೊಂದು ಬದಿಯಲ್ಲಿ ಮೂರು ಸಿಂಹ ಹಾಗೂ ಅಶೋಕ ಚಕ್ರವಿದೆ.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ