ಕೋಲಾರ: ನಗರದಲ್ಲಿ ಆರ್.ಟಿ.ಓ (RTO) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಂದೇ ನಂಬರ್‌ನ ಎರಡು ಬಸ್‍ಗಳನ್ನು (Bus) ವಶಕ್ಕೆ ಪಡೆದಿದ್ದಾರೆ. ತೆರಿಗೆ ವಂಚಿಸಲು ಬಸ್ ಮಾಲೀಕರು ಒಂದೇ ನಂಬರ್‌ನ ಎರಡು ಬಸ್‍ಗೆ ಬಳಸಿದ್ದಾರೆ. ಈ ವಿಚಾರ ಕೆಜಿಎಫ್ ಆರ್.ಟಿ.ಓ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ದಾಳಿ ನಡೆಸಿದ್ದಾರೆ. ಎರಡು ಬಸ್‍ಗಳು ತಮಿಳುನಾಡಿನ (Tamil Nadu) ಖಾಸಗಿ ಟೂರ್ಸ್ ಅಂಡ್ ಟ್ರಾವೆಲ್ಸ್ ಕಂಪನಿಗೆ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಅಧಿಕಾರಿಗಳು ವಾಹನಗಳನ್ನು ಸೀಜ್ ಮಾಡಿದ್ದು, ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.