ಉನ್ನತ ವ್ಯಾಸಂಗಕ್ಕೆ ತೆರಳಿದ ಸೂಡ ಅಧಿಕಾರಿ ಉಬೈದುಲ್ಲಾ ರಿಗೆ ಬೀಳ್ಕೊಡುಗೆ- ಭವಿಷ್ಯದ ಕಲ್ಪನೆ ಇರುವ ಅಧಿಕಾರಿಗಳಿಂದ ಅಭಿವೃದ್ಧಿ ಸಾಧ್ಯ:ವಿನಯ್ ಕುಮಾರ್ ಕಂದಡ್ಕ – ಕರುನಾಡ ನ್ಯೂಸ್


ಸುಳ್ಯ ನಗರಪಂಚಾಯತ್ ನಲ್ಲಿ 6 ವರ್ಷಗಳಿಂದ ನಗರಾಭಿವೃದ್ಧಿ ಪ್ರಾದಿಕಾರದ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ಉನ್ನತ ವ್ಯಾಸಂಗಕ್ಕೆ ತೆರಳಿದ ಉಬೈದುಲ್ಲಾ ರನ್ನು ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಸರಳ ಸಮಾರಂಭವೊಂದರಲ್ಲಿ ಬೀಳ್ಕೊಡಲಾಯಿತು. ಸಭಾದ್ಯಕ್ಷತೆಯನ್ನು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಮಾಜಿ ಅಧ್ಯಕ್ಷರುಗಳಾದ ಎಂ. ವೆಂಕಪ್ಪಗೌಡ ಎನ್. ಎ. ರಾಮಚಂದ್ರ, ಭಾಗವಹಿದ್ದರು ಲಯನ್ಸ್ ಮಾಜಿ ರಾಜ್ಯಪಾಲ ಎಂ. ಬಿ. ಸದಾಶಿವ, ಮಾಜಿ ನಗರ ಪಂಚಾಯತ್ ಸದಸ್ಯ ಕೆ. ಎಂ. ಮುಸ್ತಫ ಶುಭ ಹಾರೈಸಿ ಮಾತನಾಡಿದರು ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ ವಂದಿಸಿದರು, ನಗರ ಪಂಚಾಯತ್ ವತಿಯಿಂದ ಶಾಲುಹೊದಿಸಿ ನೆನಪಿನ ಕಾಣಿಕೆ ನೀಡಿ ಶುಭಹಾರೈಸಲಾಯಿತು. ಮಾಜಿ ನಗರಪಂಚಾಯತ್ ಸದಸ್ಯ ಕೆ. ಎಂ. ಮುಸ್ತಫ ಇದೇ ಸಂದರ್ಭದಲ್ಲಿ ಶಾಲು ಹೊದಿಸಿ ಮಾಜಿ ಉನ್ನತ ಶಿಕ್ಷಣ ಸಚಿವ ಬಿ. ಎ. ಮೊಯಿದಿನ್ ರವರ ಆತ್ಮಕಥನ ನನ್ನೊಳಗಿನ ನಾನು ಪುಸ್ತಕವನ್ನು ಕೊಡುಗೆಯಾಗಿ ನೀಡಿದರು. ಉಬೈದುಲ್ಲಾರವರು ಸನ್ಮಾನಕ್ಕೆ ಉತ್ತರಿಸಿ ಸುಳ್ಯದಲ್ಲಿ ನಾನು ಸಲ್ಲಿಸಿದ ಸೇವೆ ಜೀವನದುದ್ದಕ್ಕೂ ಮರೆಯಲು ಸಾಧ್ಯವಿಲ್ಲದ್ದು ನೀವು ತೋರಿದ ಪ್ರೀತಿ ಅವಿಸ್ಮರಣೀಯ ಎಂದರು
ನಗರಪಂಚಾಯತ್ ಆವರಣದಲ್ಲಿ ಸಸಿನೆಟ್ಟು ಮಾದರಿಯಾದರು

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ