ಟ್ಯೂಶನ್ ಮುಗಿಸಿ ಹೋಗ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ – ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವು – ಕರುನಾಡ ನ್ಯೂಸ್


ರಾಮನಗರ: ಟ್ಯೂಶನ್ (Tuition) ಮುಗಿಸಿ ಮನೆಗೆ ಹೋಗುತ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ (Goods Vehicle) ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವನ್ನಪ್ಪಿದ ಘಟನೆ ರಾಮನಗರದಲ್ಲಿ

(Ramanagara) ನಡೆದಿದೆ. ಸುಚಿತ್ (10) ಮೃತ ದುರ್ದೈವಿ. ರಾಮನಗರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಅಪಘಾತ ನಡೆದಿದ್ದು, ಸಾವಿನ ಸಂಖ್ಯೆ ಒಟ್ಟು ಮೂರಕ್ಕೆ ಏರಿದೆ. ಆಗಸ್ಟ್ 9ರಂದು ಟ್ಯೂಶನ್ ಮುಗಿಸಿಕೊಂಡು ಐವರು ಮಕ್ಕಳು ಮನೆಗೆ ಹೋಗುತ್ತಿದ್ದ ಸಂದರ್ಭ ಗೂಡ್ಸ್ ವಾಹನ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದರು. ಘಟನೆಯಿಂದ ಬದುಕುಳಿದ ಮೂವರು ಮಕ್ಕಳಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಪೈಕಿ ಸುಚಿತ್ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ