ಪರೇಡ್ ವೇಳೆ ಕುಸಿದು ಬಿದ್ದ ಮೂವರು ವಿದ್ಯಾರ್ಥಿಗಳು – ಕರುನಾಡ ನ್ಯೂಸ್


ಯಾದಗಿರಿ: ನಾಡಿನಾದ್ಯಂತ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಅದ್ಧೂರಿಯಿಂದ ಆಚರಿಸಲಾಯಿತು. ಅಂತೆಯೇ ಯಾದಗಿರಿಯಲ್ಲಿ (Yadagiri) ಈ ಸಂಭ್ರಮದ ವೇಳೆ ಮೂವರು ವಿದ್ಯಾರ್ಥಿಗಳು(Students) ಕುಸಿದು ಬಿದ್ದ ಘಟನೆ ನಡೆದಿದೆ. ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಪರೇಡ್ ನಿರ್ಗಮನದ ವೇಳೆ ಕುಸಿದು ಮೂವರು ಕುಸಿದುಬಿದ್ದಿದ್ದಾರೆ. ಯಾದಗಿರಿಯ ಆದರ್ಶ ಸಮಿತಿ ಶಾಲೆಯ ವಿದ್ಯಾರ್ಥಿಗಳು ಬೆಳಗ್ಗೆ ಉಪಹಾರ ಸೇವಿಸದೇ ಸ್ವಾತಂತ್ರ್ಯೋತ್ಸವದ ಕವಾಯತಿನಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸುಸ್ತಾಗಿ, ವಿಪರೀತ ಬಿಸಿಲಿನಿಂದ ಬಸವಳಿದು ಕುಸಿದು ಬಿದ್ದಿದ್ದಾರೆ. ವಿದ್ಯಾರ್ಥಿಗಳು ಕುಸಿದು ಬೀಳುತ್ತಿದ್ದಂತೆಯೇ ಶಿಕ್ಷಕರು ಹಾಗೂ ಸಹಪಾಠಿಗಳು ಸಹಾಯಕ್ಕೆ ಧಾವಿಸಿದ್ದಾರೆ. ಇತ್ತ ಶಿಕ್ಷಕರು ನೀರು ಗ್ಲೂಕೋಸ್ ನೀಡಿ, ನೀರು ಕುಡಿಸಿದ್ದಾರೆ. ವಿದ್ಯಾರ್ಥಿಗಳು ಆರೋಗ್ಯ ಸುಧಾರಿಸಿದೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ