ದೆಹಲಿಯ ಕೆಂಪು ಕೋಟೆ, ರಾಜ್‍ಘಾಟ್‍ನಲ್ಲಿ ಸೆಕ್ಷನ್ 144 ಜಾರಿ – ಕರುನಾಡ ನ್ಯೂಸ್


ನವದೆಹಲಿ: ಕೆಂಪು ಕೋಟೆ, ರಾಜ್‍ಘಾಟ್ ಹಾಗೂ ಐಟಿಒನಲ್ಲಿ ದೆಹಲಿ ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವೂ ಆಗಸ್ಟ್ 15 ಸ್ವಾತಂತ್ರ್ಯ ದಿನವನ್ನು (Independent Day) ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಅಂತೆಯೇ ದೇಶಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಉಪ ಪೊಲೀಸ್ ಆಯುಕ್ತ, ಕೆಂಪು ಕೋಟೆ ಹಾಗೂ ರಾಜ್‍ಘಾಟ್ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಭೆ, ಸಮಾರಂಭಗಳನ್ನು ಮಾಡಲು ಅನುಮತಿ ನೀಡಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನು ಎಂದಿನಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರು ಕೆಂಪು ಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

The post ದೆಹಲಿಯ ಕೆಂಪು ಕೋಟೆ, ರಾಜ್‍ಘಾಟ್‍ನಲ್ಲಿ ಸೆಕ್ಷನ್ 144 ಜಾರಿ appeared first on ಕರುನಾಡ ನ್ಯೂಸ್.Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ